ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ನಿಶ್ಚಿತವಾಗಿ ಆರಂಭದಲ್ಲೇ ವಿಜಯ ಸಾಧಿಸಲಿದೆ- ಚೀನಾದ ಅಧಿಕಾರಿ ಜೀ.ರೋಂಗ್

ಮಾರಣಾಂತಿಕ ಕೊರೊನಾದಿಂದ ಬಹುತೇಕ ಹೊರಬಂದಿರುವ ಚೀನಾ, ಭಾರತ ತೆಗೆದುಕೊಂಡ ದಿಟ್ಟಕ್ರಮವನ್ನು ಶ್ಲಾಘಿಸಿದೆ.

ಚೀನಾದಲ್ಲಿ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರು ಮಾತನಾಡುತ್ತಾ, “ಇಟೆಲಿಗೆ ಈಗಾಗಲೇ ನೆರವನ್ನು ಘೋಷಿಸಲಾಗಿದೆ. ಭಾರತಕ್ಕೂ ನಮ್ಮ ಸಂಪೂರ್ಣ ನೆರವನ್ನು ಕೊಡಲಿದ್ದೇವೆ” ಎಂದು ಹೇಳಿದ್ದಾರೆ.

ಚೀನಾದ ವುಹಾನ್ ನಗರದಿಂದ ಕೊರೊನಾ ವೈರಸ್ ಹರಡಲು ಆರಂಭವಾಗಿತ್ತು. ಈಗ, ಎರಡು ತಿಂಗಳ ನಂತರ, ಆ ನಗರದಲ್ಲಿ ಬಸ್ ಸಂಚಾರ ಮತ್ತೆ ಆರಂಭವಾಗಿದೆ.

“ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ಭಾರತ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ. ಈ ವಿರುದ್ದದ ಹೋರಾಟದಲ್ಲಿ ಭಾರತ ನಿಶ್ಚಿತವಾಗಿ ಆರಂಭದಲ್ಲೇ ವಿಜಯ ಸಾಧಿಸಲಿದೆ” ಎಂದು ಚೀನಾದ ಅಧಿಕಾರಿ ಜೀ.ರೋಂಗ್ ಹೇಳಿದ್ದಾರೆ.

“ಚೀನಾ ವಿಷಮ ಸ್ಥಿತಿಯಲ್ಲಿದ್ದಾಗ ಭಾರತ ವೈದ್ಯಕೀಯ ನೆರವನ್ನು ನೀಡಿತ್ತು. ಇದಕ್ಕಾಗಿ ನಾವು ಭಾರತಕ್ಕೆ ಧನ್ಯವಾದವನ್ನು ಸಲ್ಲಿಸುತ್ತಿದ್ದೇವೆ. ಭಾರತಕ್ಕೂ ನಮ್ಮ ಸಂಪೂರ್ಣ ನೆರವು ಸಿಗಲಿದೆ” ಎಂದು ರೋಂಗ್ ತಿಳಿಸಿದ್ದಾರೆ.

ಭಾರತದಲ್ಲಿ ಇದುವರೆಗೆ 649 ಕೊರೊನಾ ಪ್ರಕರಣ ದಾಖಲಾಗಿದ್ದು, ಹದಿನಾಲ್ಕು ಜನ ಈ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ. ಕೊರೊನಾವೈರಸ್ ಸೋಂಕು ಹರಡದಂತೆ, ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ, ಪಾನ್ ಮಸಾಲ್ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಿದೆ.

 

Share Post

Leave a Reply

Your email address will not be published. Required fields are marked *

error: Content is protected !!