ಡೆಡ್ಲಿ ಕೊರೊನಾ : ಅನಿವಾರ್ಯದಿಂದ ಶವಗಳ ಮಧ್ಯೆ ಮಲಗಿದ್ದ ಸೈನಿಕನೊಬ್ಬ ಸೋಂಕು ತಗುಲಿ ಸಾವನ್ನಪ್ಪಿದ್ದಾನೆ..!

ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ರೋಗಕ್ಕೆ ತುತ್ತಾದ ವಿಶ್ವದ ನಾಲ್ಕನೇ ಅತಿ ದೊಡ್ಡ ದೇಶ ಸ್ಪೇನ್. ಸಾವಿನ ವಿಷಯದಲ್ಲಿ ಈ ದೇಶವು ಚೀನಾ ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದೆ. ಸ್ಪೇನ್‌ನಲ್ಲಿ ನಿನ್ನೆ ಮಾತ್ರ 7457 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈವರೆಗೆ 49515 ಜನರು ಸೋಂಕಿಗೊಳಗಾಗಿದ್ದಾರೆ. ಬುಧವಾರ ಇಲ್ಲಿ ಕೊರೋನಾದಿಂದ 656 ಸಾವುಗಳು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 3647 ಕ್ಕೆ ತಲುಪಿದೆ.

ಸ್ಪೇನ್‌ನ ಉಪ ಪ್ರಧಾನ ಮಂತ್ರಿ ಕಾರ್ಮೆನ್ ಕ್ಯಾಲ್ವೊ ಕೂಡ ಕೊರೋನಾ ಸೋಂಕಿಗೊಳಗಾಗಿದ್ದಾರೆ. ಬುಧವಾರ ಉಪ ಪ್ರಧಾನಿಗೆ ಸೋಂಕಿರುವುದು ಗೊತ್ತಾಗಿದೆ. 62 ವರ್ಷದ ಕಾರ್ಮೆನ್ ಕ್ಯಾಲ್ವೊ ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಮ್ಮನ್ನು ತಾವು ಸ್ವಯಂ-ಪ್ರತ್ಯೇಕಿಸಿಕೊಂಡಿದ್ದರು. ಮನೆಯಿಂದಲೇ ಅವರು ಅನೇಕ ದಿನಗಳಿಂದ ಕೆಲಸ ಮಾಡುತ್ತಿದ್ದರು.

ಈ ಮಧ್ಯೆ ಹೃದಯ ಕಲಕುವ ಘಟನೆ ನಡೆದಿದೆ. ಸೋಂಕಿತರ ರಕ್ಷಣೆಗೆ ಹೋಗಿದ್ದ ಸೈನಿಕನೊಬ್ಬ ಸಾವನ್ನಪ್ಪಿದ್ದಾನೆ. ಆಸ್ಪತ್ರೆ ಕೊಳಕು ಹಾಗೂ ಶವದ ಮಧ್ಯೆ ಮಲಗುವ ಅನಿವಾರ್ಯದಿಂದ ಆತನಿಗೂ ಸೋಂಕು ಬಂದಿತ್ತು ಎನ್ನಲಾಗಿದೆ. ಅನೇಕ ಕಡೆ ವೃದ್ಧರನ್ನು ಏಕಾಂಗಿಯಾಗಿ ಬಿಡಲಾಗಿದೆ. ಕೆಲ ವೃದ್ಧರು ಹಾಸಿಗೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲೂ ಹೆಣಗಳು ಸಿಕ್ಕಿವೆಯಂತೆ. ಆ ಆಸ್ಪತ್ರೆಯಲ್ಲಿ ಜೀವಂತ ಒಬ್ಬ ವ್ಯಕ್ತಿ ಸಿಕ್ಕಿಲ್ಲ ಎನ್ನಲಾಗಿದೆ. ಆಘಾತಕಾರಿ ವಿಷ್ಯವೆಂದ್ರೆ ಸ್ಪೇನ್ ನಲ್ಲಿ 5,400 ಆರೋಗ್ಯ ಸಿಬ್ಬಂದಿಯೇ ಕೊರೊನಾ ಸೋಂಕಿಗೊಳಗಾಗಿದ್ದಾರೆ.

 

Share Post

Leave a Reply

Your email address will not be published. Required fields are marked *

error: Content is protected !!