ರಾಜ್ಯದಲ್ಲಿ ಮತ್ತೆ ಹೊಸದಾಗಿ 10 ಮಂದಿಯಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆ.!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರುದ್ರತಾಂಡದವ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಬುಧವಾರ ಒಂದೇ ದಿನದಲ್ಲಿ 10 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.

51 ಮಂದಿ ಸೋಂಕಿತರ ಪೈಕಿ ಈಗಾಗಲೇ ರಾಜ್ಯದಲ್ಲಿ ಓರ್ವ ವ್ಯಕ್ತಿ ವೈರಸ್ ನಿಂದಾಗಿ ಸಾವನ್ನಪ್ಪಿದ್ದು, ಕೆಲ ದಿನಗಳ ಹಿಂದಷ್ಟೇ ಮೂವರು ವ್ಯಕ್ತಿಗಳು ವೈರಸ್ ನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹೊಸದಾಗಿ ಸೋಂಕಿಗೊಳಗಾದ 10 ಮಂದಿಯ ಕುರಿತ ವಿವರ ಈ ಕೆಳಗಿನಿಂತಿದೆ…

  • ಚಿತ್ರದುರ್ಗ ಮೂಲದ ನಿವಾಸಿಯಾಗಿರುವ 37 ವರ್ಷದ ಮಹಿಳೆಯೊಬ್ಬರಲ್ಲಿ ನಿನ್ನೆಯಷ್ಟೇ ಸೋಂಕು ಪತ್ತೆಯಾಗಿತ್ತು. ಗುಯಾನದಿಂದ ಬಂದಿದ್ದ ಮಹಿಳೆ ಮಾರ್ಚ್ 20 ರಂದು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದರು. ಇದಾದ ಬಳಿಕ ದಾವಣೆಗೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
  • ಬ್ರೆಜಿಲ್ ಹಾಗೂ ಅರ್ಜೆಟೈನಾದಿಂದ ಮಾರ್ಚ್ 19 ರಂದು ಬೆಂಗಳೂರಿಗೆ ಬಂದಿದ್ದ 63 ವರ್ಷದ ವ್ಯಕ್ತಿಯಲ್ಲಿ ಸೋಂಕು ಬಪತ್ತೆಯಾಗಿದದು, ಇದೀಗ ನಗರ ಆಸ್ಪತ್ರೆಗೆ ದಾಖಲಾಗಿ, ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
  • ವಿದೇಶದಿಂದ ಬಂದಿದ್ದ 63 ವರ್ಷದ ವ್ಯಕ್ತಿಯ 59 ವರ್ಷದ ಪತ್ನಿಯೊಬ್ಬರಲ್ಲಿ ವೈರಸ್ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಸ್ಪೇನ್’ಗೆ ಭೇಟಿ ನೀಡಿದ್ದ 26 ವರ್ಷದ ವ್ಯಕ್ತಿ ಮಾರ್ಚ್ 24 ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದು, ಇವರಲ್ಲೂ ಸೋಂಕು ಪತ್ತೆಯಾಗಿದೆ. ಈ ವ್ಯಕ್ತಿ ವಿದೇಶದಿಂದ ಬಂದಿದ್ದ ಮತ್ತೊಬ್ಬ ವ್ಯಕ್ತಿಯೊಂದಿಗೆ ನಗರಕ್ಕೆ ಆಗಮಿಸಿದ್ದು, ಆ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿತ್ತು. ಇದೀಗ ಈತನಲ್ಲೂ ವೈರಸ್ ಪತ್ತೆಯಾಗಿದೆ.
  • ಅಥೆನಾ ಮತ್ತು ಲಂಡನ್ ನಿಂದ ಮಾರ್ಚ್ 18 ರಂದು ನಗರಕ್ಕೆ ಆಗಿಸಿದ್ದ 63 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಮಹಿಳೆಯೊಂದಿಗೆ 69 ವರ್ಷದ ಪತಿ ಕೂಡ ನಗರಕ್ಕೆ ಆಗಮಿಸಿದ್ದರು.
  • ಈ ಹಿಂದೆ ಕೋರೋನಾ ವೈರಸ್ ದೃಢಪಟ್ಟಿದ್ದ ವ್ಯಕ್ತಿಯೊಬ್ಬರ 9 ವರ್ಷದ ಮಗಳಲ್ಲಿಯೂ ವೈರಸ್ ಪತ್ತೆಯಾಗಿದೆ. ಈ ವ್ಯಕ್ತಿ ನೆದರ್ ಲ್ಯಾಂಡ್ ನಿಂದ ಮಾರ್ಚ್ 19 ರಂದು ಬೆಂಗಳೂರಿಗೆ ವಾಪಸ್ಸಾಗಿದ್ದರು.
  • ಇದೇ ವ್ಯಕ್ತಿಯ 7 ವರ್ಷದ ಮತ್ತೊಬ್ಬ ಪುತ್ರಿಗೂ ಸೋಂಕು ತಗುಲಿದೆ.
  • ದುಬೈನಿಂದ ಮಾರ್ಚ್ 18 ರಂದು ಉಡುಪಿಗೆ ಆಗಮಿಸಿದ್ದ 34 ವರ್ಷದ ವ್ಯಕ್ತಿಯಲ್ಲಿ ವೈರಸ್ ಪತ್ತೆಯಾಗಿದೆ. ಇದೀಗ ಈ ವ್ಯಕ್ತಿ ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
  • ನಗರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬೆಂಗಳೂರಿನಲ್ಲಿ ಈ ವರೆಗೂ 32 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
Share Post

Leave a Reply

Your email address will not be published. Required fields are marked *

error: Content is protected !!