ಕೊರೊನಾ ನಮ್ಮಿಂದ ಶುರುವಾಗಿಲ್ಲ, ಡ್ರಾಮ ಶುರುಮಾಡಿದ ಚೀನಾ ಮಾಧ್ಯಮಗಳು..!

ಬೀಜಿಂಗ್​: ಮಹಾಮಾರಿ ಕೊರೊನಾ ವೈರಸ್​ ಹುಟ್ಟನ್ನು ಇಟಲಿ ತಲೆಗೆ ಕಟ್ಟುವ ಪ್ರಯತ್ನಕ್ಕೆ ಚೀನಾ ಮಾಧ್ಯಮಗಳು ಇಳಿದಿವೆ. ಇಟಲಿಯ ಮಿಲಾನ್​ ಮೂಲದ ಪ್ರಾಧ್ಯಪಕರೊಬ್ಬರು ಕಳೆದ ನವೆಂಬರ್​ನಲ್ಲೇ ವಿಚಿತ್ರ ರೀತಿಯ ಕಾಯಿಲೆಯನ್ನು ವೈದ್ಯರು ನೋಡಿದ್ದರು ಎಂಬ ಹೇಳಿಕೆಯ ಬೆನ್ನಲ್ಲೇ ಚೀನಾ ಮಾಧ್ಯಮಗಳು ಚರ್ಚೆಗೆ ಇಳಿದಿವೆ.

ಚೀನಾದ ಹುಬೇ ಪ್ರಾಂತ್ಯದ ವುಹಾನ್​ ಕೊರೊನಾ ವೈರಸ್​ ತವರು ಎಂದು ಈಗಾಗಲೇ ಜಗಜ್ಜಾಹೀರಾಗಿದೆ. ಆದರೆ, ಇದೀಗ ಸೋಂಕಿತ ಪ್ರಕರಣಗಳು ಚೀನಾದಲ್ಲಿ ಶೂನ್ಯದ ಕಡೆಗೆ ಮುಖಮಾಡಿದ್ದು, ಯುರೋಪ್​ನಲ್ಲಿ ಏರಿಕೆಯಾಗುತ್ತಿರುವುದರಿಂದ ಇಟಲಿ ಕಡೆ ಚೀನಾ ಬೊಟ್ಟು ಮಾಡಿದೆ.

ಇಟಲಿ ಪ್ರಾಧ್ಯಪಕ ಗ್ಯುಸೆಪ್ಪೆ ರೆಮುಜಿ ಮಾಡಿದ ಪ್ರಸ್ತಾಪವನ್ನು ಮಂದಿಟ್ಟುಕೊಂಡು ಚೀನಾದ ಬಹುತೇಕ ಮಾಧ್ಯಮಗಳು ಇಟಲಿಯನ್ನು ದೂಷಿಸುತ್ತಿವೆ. ಚೀನಾದಲ್ಲಿ ಕೊರೊನಾ ಸ್ಪೋಟಗೊಳ್ಳುವ ಒಂದು ತಿಂಗಳ ಮುಂದೆಯೇ ಇಟಲಿಯಲ್ಲಿ ಕೊರೊನಾ ಹರಡಿರಬಹುದು ಎಂದು ಗ್ಯುಸೆಪ್ಪೆ ರೆಮುಜಿ ಹೇಳಿದ್ದಾರೆ.

ಮಿಲಾನ್​ನ ಮಾರಿಯೋ ನೆಗ್ರಿ ಇನ್ಸ್ಟಿಟ್ಯೂಟ್ ಫಾರ್ ಫಾರ್ಮಾಕೊಲಾಜಿಕಲ್ ರಿಸರ್ಚ್ ಕೇಂದ್ರದ ನಿರ್ದೇಶಕರಾಗಿರುವ ಗ್ಯುಸೆಪ್ಪೆ ರೆಮುಜಿ ಕಳೆದ ವಾರ ನಡೆದ ಮಾಧ್ಯಮ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ವಿಚಿತ್ರವಾದ ರೋಗದ ಲಕ್ಷಣಗಳನ್ನು ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ಇಟಲಿಯ ಸ್ಥಳೀಯ ವೈದ್ಯರು ಗುರುತಿಸಿದ್ದರು ಎಂದು ಹೇಳಿದ್ದರು.

ಅವರ ಹೇಳಿಕೆಯನ್ನು ತಕ್ಷಣದ ಗಮನಿಸಿದ ಚೀನಾ ಮಾಧ್ಯಮಗಳು ಜಾಗತಿಕವಾಗಿ ಹರಡಿರುವ ಕೊರೊನಾ ನಮ್ಮಿಂದ ಶುರುವಾಗಿಲ್ಲ ಎಂದು ಸಾಬೀತು ಮಾಡಲು ಪ್ರಯತ್ನಿಸುತ್ತಿವೆ.

Share Post

Leave a Reply

Your email address will not be published. Required fields are marked *

error: Content is protected !!