ನನಗೆ ಕೊರೋನಾ ಇದೆ, ಹತ್ರ ಬರ್ತೀರಾ? ಬುಧವಾರ ರಾತ್ರಿ ಬೆಂಗಳೂರಿನಲ್ಲಿ ರಂಪಾಟ ಮಾಡಿದ ಟೆಕ್ಕಿಯೀಗ ಪೊಲೀಸರ ಅತಿಥಿ

ಬೆಂಗಳೂರು : ನನಗೆ ಕೊರೋನಾ ವೈರಸ್ಇದೆ. ಯಾರಾದ್ರೂ ಹತ್ರ ಬರ್ತೀರಾ? ಎಂದು ಬುಧವಾರ ರಾತ್ರಿ ರಸ್ತೆ ಮಧ್ಯೆ ನಿಂತು ರಂಪಾಟ ಮಾಡುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ಈಗ ಬೆಂಗಳೂರಿನ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರಿನ ಯಶವಂತಪುರದಲ್ಲಿ ನಿನ್ನೆ ಮಧ್ಯರಾತ್ರಿ ಈ ಹೈಡ್ರಾಮ ನಡೆದಿದೆ. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತನ್ನನ್ನು ಎಳೆದುಕೊಂಡು ಹೋಗುತ್ತಾರೆಂಬ ಭಯದಲ್ಲಿ ಯಾರಾದರೂ ನನ್ನ ಹತ್ತಿರ ಬಂದರೆ ಅವರಿಗೂ ಕೊರೋನಾ ಬರುತ್ತದೆ ಎಂದು ನಾಟಕ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಡುರಾತ್ರಿ ರಸ್ತೆ ಮಧ್ಯೆ ಗಲಾಟೆ ಮಾಡಿದ ವಿಜಯಪುರ ಮೂಲದ ಸಚಿನ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಸ್ಥಳೀಯರ ಬಳಿ ಹೋಗಿ ನಂಗೆ ಕೊರೋನಾ ‌ಇದೆ, ಹತ್ರ ಬನ್ನಿ ಎಂದು ಪುಂಡಾಟ ಮಾಡುತ್ತಿದ್ದ ಸಚಿನ್ ವರ್ತನೆಯಿಂದ ಅಲ್ಲಿನ ಜನರು ಹೆದರಿದ್ದರು. ಹೀಗಾಗಿ, ಪೊಲೀಸರಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸಚಿನ್​ಗೆ ಥಳಿಸಿ, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಸಚಿನ್ ಕೆಲ ಮಾದರಿಯ ಡ್ರಗ್ಸ್ ಸೇವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವು ಆಟೋ ಡ್ರೈವರ್​ಗಳ ಮೇಲೂ ಸಚಿನ್ ಹಲ್ಲೆ ನಡೆಸಿದ್ದಾನೆ. ಯಶವಂತಪುರದ ಪೊಲೀಸರ ವಶದಲ್ಲಿರುವ ಸಚಿನ್​ನನ್ನು ವಿಚಾರಣೆ ನಡೆಸಲಾಗುತ್ತಿದೆ.

Share Post

Leave a Reply

Your email address will not be published. Required fields are marked *

error: Content is protected !!