ಸಂಕಷ್ಟದ ಸಮಯದಲ್ಲೇ ಬಂತು ಎಸ್‌ಎಂಎಸ್: ಜಿಲ್ಲಾಡಳಿತ ಮಧ್ಯ ಪ್ರವೇಶಕ್ಕೆ ಮನವಿ

ಶಿವಮೊಗ್ಗ: ಕೊರೋನಾ ಸೋಂಕು ಹರಡದಂತೆ ತಡೆಯಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಶಿವಮೊಗ್ಗದಲ್ಲಿ ಒಂದು ವಾರದಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ಇದರಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಚಾಲಕರು, ಕಾರ್ಮಿಕರು, ವ್ಯಾಪಾರಿಗಳಿದ್ದಾರೆ. ಇವರಿಗೆಲ್ಲ ಸಂಕಷ್ಟದ ಸಮಯದಲ್ಲೇ ಸಾಲದ ಕಂತು ಪಾವತಿಸುವಂತೆ ಬ್ಯಾಂಕ್, ಫೈನಾನ್ಸ್ ಗಳಿಂದ ನೋಟಿಸ್ ನೀಡಲಾಗಿದೆ.

ಸಾಲ ಪಡೆದ ಗ್ರಾಹಕರಿಗೆ ಎಸ್‌ಎಂಎಸ್, ದೂರವಾಣಿ ಮೂಲಕ ಸೂಚನೆ ನೀಡಲಾಗುತ್ತಿದೆ.

ಮಹಿಳಾ ಸಂಘದ ಸದಸ್ಯರಿಗೆ ವಾರದ ಸಾಲದ ಕಂತಿನ ಹಣ ತುಂಬುವಂತೆ ಸೂಚನೆ ನೀಡಲಾಗಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸುವಂತೆ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ ಸಾಲಗಾರರು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

 

Share Post

Leave a Reply

Your email address will not be published. Required fields are marked *

error: Content is protected !!