ಬಡ ಜನತೆಗೆ ಅಕ್ಕಿಯ ಜತೆಗೆ ದಿನಸಿಯ ವಿತರಣೆಗೂ ಮಾಜಿ ಸಚಿವ ರೈ ಒತ್ತಾಯ

ಬಂಟ್ವಾಳ: ಜಾಗತಿಕ ಕೋವಿಡ್ ವೈರಸ್ ಮಹಾ ಮಾರಿ ಖಾಯಿಲೆಯನ್ನು ಜನತೆ ಗಂಭೀರವಾಗಿ ಸ್ವಯಂಪ್ರೇರಿತರಾಗಿ ಜಾಗ್ರತೆ ವಹಿಸಬೇಕು. ಜತೆಗೆ ಸರಕಾರ ಬಡ ಜನತೆಗೆ ಅಕ್ಕಿಯ ಜತೆಗೆ ದಿನಸಿ ಸಾಮಾಗ್ರಿಗಳನ್ನೂ ಉಚಿತವಾಗಿ ವಿವರಿಸುವುದಕ್ಕೆ ಕ್ರಮವಹಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಒತ್ತಾಯಿಸಿದ್ದಾರೆ.

ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಮಾಡಲಾಗಿದೆ. ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿ ಮಾಡುವಾಗ ಕೆಲವು ವಿನಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಈಗಾಗಲೇ ಉಚಿತ ಅಕ್ಕಿ ಒದಗಿಸುತ್ತಿರುವ ಜತೆಗೆ ದಿನಸಿ ಸಾಮಾಗ್ರಿಗಳಾದ ಉಪ್ಪು,ಹುಳಿ,ಮೆಣಸು, ಎಣ್ಣೆ,ತೆಂಗಿನಕಾಯಿಯನ್ನೂ ಆದ್ಯತೆಯ ಮೇರೆಗೆ ಉಚಿತವಾಗಿ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು.

ಸಾರ್ವಜನಿಕರು ಸರಕಾರದ ಆದೇಶವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಕೊರೋನಾ ವೈರಸ್ ಜನರಿಂದ ಜನರಿಗೆ ಹರಡದಂತೆ ಎಚ್ಚರಿಕೆ ವಹಿಸಲು ಅವರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

 

Share Post

Leave a Reply

Your email address will not be published. Required fields are marked *

error: Content is protected !!