ದೇಶಾದ್ಯಂತ ಕೊರೋನಾ ಪ್ರಯೋಗಾಲಯಗಳ ಸಂಖ್ಯೆ 236ಕ್ಕೆ ಹೆಚ್ಚಳ, ಕರ್ನಾಟಕದಲ್ಲಿ 7 ಸೆಂಟರ್ ಸ್ಥಾಪನೆ.

ಬೆಂಗಳೂರು: ಕೊರೊನಾ ಸೋಂಕು ಪರೀಕ್ಷೆಗೆ ದೇಶಾದ್ಯಂತ ಪ್ರಯೋಗಾಲಯಗಳ ಸಂಖ್ಯೆಯನ್ನು 236ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ 7 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ.

ಹಾಸನ ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು, ಶಿವಮೊಗ್ಗ ಮೆಡಿಕಲ್ ಕಾಲೇಜು, ಬೆಂಗಳೂರಿನ ಏರ್ ಫೋರ್ಸ್ ಕಮಾಂಡೊ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು, ರಾಷ್ಟ್ರೀಯ ವೈರಾಣು ಸಂಸ್ಥೆ ಶಾಖಾ ಘಟಕ ಹಾಗೂ ಗುಲ್ಬರ್ಗದ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗುತ್ತಿದೆ.

ಪ್ರತಿನಿತ್ಯ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಪರೀಕ್ಷೆಗೆ ಪ್ರಯೋಗಾಲಯಗಳ ಕೊರತೆ ತೀವ್ರವಾಗಿ ಕಾಡಿತ್ತು. ಆರಂಭದಲ್ಲಿ ಬೆಂಗಳೂರಿನ ಎರಡು ಪ್ರಯೋಗಾಲಯಗಳು ಮಾತ್ರ ಸೋಂಕು ಪರೀಕ್ಷೆ ನಡೆಸುತ್ತಿದ್ದವು. ಈಗ ವಿವಿಧ ಜಿಲ್ಲೆಗಳಲ್ಲೂ ಅವಕಾಶ ಕಲ್ಪಿಸಲಾಗಿದೆ.

ಮುಂದಿನ ಹಂತದಲ್ಲಿ ಮಂಗಳೂರು, ರಾಯಚೂರು, ಬೀದರ್ ಮತ್ತು ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲೂ ಪ್ರಯೋಗಾಲಯಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ. ದೇಶಾದ್ಯಂತ 118 ಸರ್ಕಾರಿ ಲ್ಯಾಬರೇಟರಿಗಳಿವೆ.

ಆದರೆ ಹರಿದುಬರುತ್ತಿರುವ ಸೋಂಕು ಮಾದರಿಗಳನ್ನು ಪರೀಕ್ಷೆ ಮಾಡಲು ಇರುವ ಪ್ರಯೋಗಾಲಯಗಳು ಸಾಲದೆ ಇರುವುದರಿಂದ ಹೊಸದಾಗಿ 92 ಪ್ರಯೋಗಾಲಯಗಳನ್ನು ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಸ್ಥಾಪಿಸಲಾಗಿದೆ. 26 ಖಾಸಗಿ ಸಂಸ್ಥೆಗಳ ಪ್ರಯೋಗಾಲಯಗಳಿಗೆ ಅವಕಾಶ ಕಲ್ಪಿಸಲಾಗಿದೆ.

 

Share Post

Leave a Reply

Your email address will not be published. Required fields are marked *

error: Content is protected !!