ಬಜೆಟ್ ಮಂಡನೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು- ಬಿ ಎಸ್ ಯಡಿಯೂರಪ್ಪ

ಬೆಂಗಳೂರು, 2020-21 ನೇ ಸಾಲಿನ ಕರ್ನಾಟಕ ಆಯವ್ಯಯವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ಯಶಸ್ವಿಯಾಗಿ ಮಂಡಿಸಿದರು.

ಬಜೆಟ್ ಓದುವುದರಲ್ಲಿ ಯಡಿಯೂರಪ್ಪ ಹೊಸ ಇತಿಹಾಸ ಸೃಷ್ಟಿಸಿದರು. ಯಡಿಯೂರಪ್ಪ ಅವರು ಇಂದು ಓದಿದ ಬಜೆಟ್ ರಾಜ್ಯದ ಆಯವ್ಯಯ ಇತಿಹಾಸದಲ್ಲೇ ಅತಿ ಕಡಿಮೆ ಅವಧಿಯಲ್ಲಿ ಓದಿ ಮುಗಿಸಿದ ಬಜೆಟ್ ಎಂದು ದಾಖಲೆ ಬರೆಯಿತು.

ಒಟ್ಟು 112 ಪುಟಗಳ ಬಜೆಟ್ ಪ್ರತಿಯನ್ನು ಸಿಎಂ ಯಡಿಯೂರಪ್ಪ ಅವರು 1.40 ಗಂಟೆಯಲ್ಲಿ ಓದಿ ಮುಗಿಸಿದರು. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಭಾಷಣ ಮಂಡಿಸಿದರು.

ಈ ಹಿಂದೆ 2018 ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್ ಅತಿ ದೀರ್ಘಾವಧಿಯ ಬಜೆಟ್ ಎನಿಸಿಕೊಂಡಿತ್ತು. ಒಟ್ಟು 2.38 ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್‌ನ್ನು ಸಿಎಂ ಮಂಡಿಸಿದರು.

 

Share Post

Leave a Reply

Your email address will not be published. Required fields are marked *

error: Content is protected !!