ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡಿಸಿಕೊಳ್ಳಲು‌ ಸಲಹೆ

ಹಾಸನ/ಸಕಲೇಶಪುರ ಸುದ್ದಿ

ಫೆಬ್ರವರಿ, 22 – ಗ್ರಾಮೀಣ ಪ್ರದೇಶದ ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳ ಬೇಕು ಎಂದು ಸಮಾಜ ಸೇವಕ ಬಾಚೀಹಳ್ಳಿ ಪ್ರತಾಪ್ ತಿಳಿಸಿದರು.

ಅವರಿಂದು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು‌ ಸಂಶೋಧನಾ ಕೇಂದ್ರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಕರ‌ ಸಂಘ ಬಾಳೆಕೆರೆ, ನವಚೇತನ ಯುವಕರ ಸಂಘ ಇವರ ವತಿಯಿಂದ ತಾಲ್ಲೂಕಿನ ಯಸಳೂರು ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಜನರು‌,ರೈತರು, ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಹಿರಿಯ ಪತ್ರಕರ್ತರಾದ ಹೆಚ್.ಬಿ.ಮದನ್ ಗೌಡ ಅವರು ಮಾತನಾಡಿ, ಗ್ರಾಮೀಣ ಪ್ರದೇಶ ಜನರಿಗೆ ಆರೋಗ್ಯ ಸೇವೆ ಒದಗಿಸುವುದು ಆದಿಚುಂಚನಗಿರಿ ‌ಪರಮಪೂಜ್ಯರ ಮುಖ್ಯ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ಈಗಾಗಲೇ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಗ್ರಾಮೀಣ ಜನರು ಹಾಗೂ ರೈತಾಪಿ ವರ್ಗದವರು ನಿತ್ಯದ ಕೆಲಸದ ಜೊತೆಗೆ ಆರೋಗ್ಯದ ಕಡೆಗೂ‌ ‌ಹೆಚ್ಚು ಹೆಚ್ಚ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಡಾ.ಬಿ.ಆರ್.ಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಯತೀಶ್ ಬಾಳೆಕೆರೆ ಪ್ರಾಸ್ತಾವಿಕವಾಗಿ ಮಾತನಾಡಿ ಯಸಳೂರು ‌ಹೋಬಳಿ‌ ಕೇಂದ್ರದಲ್ಲಿ ವ್ಯವಸ್ಥಿತವಾದ ಆಸ್ಪತ್ರೆ ಇಲ್ಲದೆ ಜನರು ಸಮಸ್ಯೆ‌ಎದುರಿಸುತ್ತಿದ್ದಾರೆ ಡಾಕ್ಟರ್ ಕೊರತೆಯಿಂದ ಜನರು ನಿತ್ಯ ಪರದಾಡುವಂತಾಗಿದೆ.‌ ಆದ್ದರಿಂದ ಪ್ರಾಥಮಿಕ ಆರೋಗ್ಯ‌ ಕೇಂದ್ರವನ್ನು ಸಮುದಾಯ ಆರೋಗ್ಯ ‌ಕೇಂದ್ರವಾಗಿ‌ ಮೇಲ್ದರ್ಜೆಗೆ ಏರಿಸಿ ಜನರಿಗೆ ಅನುಕೂಲ‌ ಕಲ್ಪಿಸಬೇಕು ಒತ್ತಾಯಿಸಿದರು. ಹೋಬಳಿ ಕೇಂದ್ರದಲ್ಲಿ ‌ಬಸ್ ನಿಲ್ದಾಣ, ಶೌಚಾಲಯ ‌ಸೇರಿದಂತೆ ಅನೇಕ ‌ಸಮಸ್ಯೆಗಳಿದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ‌ಗಮನಹರಿಸಬೇಕು ಎಂದು‌‌ ವೇದಿಕೆಯಲ್ಲಿ ಗಮನ‌‌ಸೆಳೆದರು.

ಕಾರ್ಯಕ್ರಮದಲ್ಲಿ ಯಸಳೂರು ಕ್ಷೇತ್ರದ ಜಿಪಂ ಸದಸ್ಯೆ ಉಜ್ಮರಿಜ್ಮಾ, ತಾಲ್ಲೂಕು ಪಂಚಾಯಿತಿ ಇಓ ಹರೀಶ್, ಕ್ಷೇತ್ರ‌ಶಿಕ್ಷಣಾಧಿಕಾರಿ ಶಿವಾನಂದ, ಆದಿಚುಂಚನಗಿರಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಡಾ. ಕವಿತಾ, ಡಿವೈಎಸ್ಪಿ ಗೋಪಿ, ‌ಸಬ್ ಇನ್ಸ್‌ಪೆಕ್ಟರ್ ಹೆಚ್. ಸುಬ್ಬಯ್ಯ, ಜೆಡಿಎಸ್ ಮುಖಂಡ ಬೆಕ್ಕಿನಹಳ್ಳಿ‌ ನಾಗರಾಜ್, ಕಾನೂನು ಅಧಿಕಾರಿ ಯೋಗೇಶ್ ಬಿ.ಇ, ಪತ್ರಕರ್ತ ವಿಜಯಕುಮಾರ್ ಸಿಗರನಹಳ್ಳಿ, ಬಾಳ್ಳುಪೇಟೆ ಬಿ.ಎಸ್.ಜಯಕುಮಾರ್, ವೈ.ಪಿ. ರಾಜೇಶ್ , ತಿರುಮಲ್ಲಪ್ಪ, ಮಲ್ಲಿಕಾ, ಶಶಿಶೇಖರ್, ರವಿತೇಜು ಮಹೇಶ್ ಮರಡಿಕೆರೆ, ರವಿಕುಮಾರ್ ಕಿತ್ತಗಳಲೆ, ಚಂದ್ರಚಾಚೀಹಳ್ಳಿ, ಶಿವಕುಮಾರ್, ದಿನೇಶ್ , ಇನ್ನಿತರರು ಇದ್ದರು.

ಶಿಕ್ಷಕ‌ ಆನಂದ ಯಸಳೂರು ಕಾರ್ಯಕ್ರಮ‌ ನಿರೂಪಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನ ‌ಮಠದ ವೈದ್ಯರು ಉಚಿತವಾಗಿ ರೋಗಿಗಳ‌ ತಪಾಸಣೆ ನಡೆಸಿ ಔಷಧಿ ವಿತರಿಸಿದರು.

ಯಸಳೂರು ‌ಸುತ್ತಮುತ್ತಲ‌ ಗ್ರಾಮಸ್ಥದ ಅನೇಕ‌ ಸಂಖ್ಯೆಯ ಜನರು ಶಿಬಿರದ ಸದುಪಯೋಗ ಪಡೆದುಕೊಂಡರು.

Share Post

Leave a Reply

Your email address will not be published. Required fields are marked *

error: Content is protected !!