‘ದಿನನಿತ್ಯ ತಪ್ಪದೆ ಸಾಧುವೊಬ್ಬರ ಭಜನೆ ಆಲಿಸುವ ಕರಡಿಗಳು’

ಭಜನೆ ಹಾಡುವುದು ಇಲ್ಲವೇ ಕೇಳುವುದಕ್ಕೆ ಸಮಯವಿಲ್ಲ ಎನ್ನುವ ಮನುಷ್ಯರ ದೈನಂದಿನ ಜೀವನದ ಜಂಜಾಟಕ್ಕೆ ಸೆಡ್ಡು ಎನ್ನುವಂತೆ ಇಲ್ಲೊಂದುಘಟನೆ ಇದೆ.

ಕಾಡಿನಲ್ಲಿರುವ ಕರಡಿಗಳು ನಿತ್ಯ ತಪ್ಪದೆ ಸಾಧುವೊಬ್ಬರ ಗುಡಿಸಲಿಗೆ ಬಂದು ಭಜನೆ ಆಲಿಸುವ ಪರಿಪಾಠ ರೂಢಿಸಿಕೊಂಡಿವೆ.

ಮಧ್ಯಪ್ರದೇಶದ ರಾಜ್ ಮಾಡ ಎಂಬ ಅರಣ್ಯ ಪ್ರದೇಶದಲ್ಲಿ ಸೀತಾರಾಂ ಎಂಬುವರು ಗುಡಿಸಲು ನಿರ್ಮಿಸಿ ನೆಲೆಸಿದ್ದಾರೆ. ಹಲವು ವರ್ಷಗಳಿಂದಇಲ್ಲಿಯೇ ಬದುಕು ಸಾಗಿಸುತ್ತಿರುವ ಸಾಧು ನಿತ್ಯ ಭಜನೆ ಮಾಡುವುದು ವಾಡಿಕೆ.

ಈಗ್ಗೆ ಕೆಲ ವರ್ಷಗಳ ಹಿಂದೆ ಭಜನೆ ಮಾಡುತಿದ್ದ ಸಂದರ್ಭದಲ್ಲಿ ಇವರ ಹಿಂದೆ ಕರಡಿಗಳು ಬಂದು ಸದ್ದಿಲ್ಲದೆ ನಿಂತು ಭಜನೆ ಆಲಿಸುತ್ತಿದ್ದವಂತೆ. ಕಣ್ತೆರೆದು ನೋಡಿದಾಗ ಕೊಂಚ ಭಯವಾದರೂ ಯಾವುದೇ ತೊಂದರೆ ನೀಡದೆ ಭಜನೆ ಆಲಿಸಿ ಕರಡಿಗಳು ತೆರಳಿವೆ. ಜತೆಗೆ ಸಾಧು ಪ್ರಸಾದವನ್ನು ಕೊಟ್ಟು ಕಳಿಸಿದ್ದರು.

ಇದೀಗ ಅದನ್ನೇ ಅಭ್ಯಾಸ ಮಾಡಿಕೊಂಡಿರುವ ಕರಡಿಗಳು ನಿತ್ಯವೂ ಸಾಧು ಗುಡಿಸಲು ಬಳಿ ಬಂದು ಭಜನೆ ಕೇಳಿ ಪ್ರಸಾದ ಒಯ್ದು ಹೋಗುತ್ತವೆ.

ಸಾಧು ಕರಡಿಗೆ ಲಲೂ ಎಂದು ಹೆಸರಿಟ್ಟಿದ್ದು ಹೆಣ್ಣು ಕರಡಿಗೆ ಲಲ್ಲಿ ಎಂದು ಮರಿಕರಡಿಗಳಿಗೆ ಚಿನ್ನು, ಮುನ್ನು ಎಂದು ಆತ್ಮೀಯವಾಗಿ ಹೆಸರಿಸಿದ್ದು ನಿತ್ಯವೂ ಸೀತಾರಾಮ್ ಅವರ ಭಜನೆಗೆ ಇವರೇ ಅತಿಥಿಗಳಾಗಿದ್ದಾರೆ.

ಜಿಲ್ಲಾ ಕೇಂದ್ರದಿಂದ 100 ಕಿಮೀ ದೂರದ ಅರಣ್ಯ ಪ್ರದೇಶದಲ್ಲಿ ಸಾಧು ಗುಡಿಸಲು ನಿರ್ಮಿಸಿಕೊಂಡು ಆಧ್ಯಾತ್ಮಿಕ ಬೋಧನೆಯಲ್ಲಿ ತೊಡಗಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!