ಕುಲ್ಫಿ ತಿನ್ನುವ ಮುನ್ನ ಎಚ್ಚರ! ಕುಲ್ಫಿಯಲ್ಲಿ ಪತ್ತೆಯಾಯ್ತು ಬ್ಲೇಡ್!

ಕೊಡಗು : ಬಿಸಿಲು ಅಂತಾ ಕುಲ್ಫಿ ತಿನ್ನುವ ಮುನ್ನ ಎಚ್ಚರ, ಬಾಯರಿಕೆ ನೀಗಿಸಿಕೊಳ್ಳಲು ತೆಗೆದುಕೊಂಡ ಕುಲ್ಫಿಯಲ್ಲಿ ಬ್ಲೇಡ್ ಪತ್ತೆಯಾಗಿರುವ ಘಟನೆ ಮಡಿಕೇರಿ ತಾಲೂಕಿನ ಆವಂದೂರಿನಲ್ಲಿ ನಡೆದಿದೆ.

ಆವಂದೂರಿನ ನಿವಾಸಿ ರಮ್ಯಾ ಎಂಬುವರು ನಾಪೋಕ್ಲುನ ತಿಂಡಿ ತಯಾರಿಕಾ ಘಟಕವೊಂದರಲ್ಲಿ ತಯಾರಾಗಿದ್ದ ಕುಲ್ಫಿ ತೆಗೆದುಕೊಂಡು ತಿನ್ನುವಾಗ ಬ್ಲೇಡ್ ಪತ್ತೆಯಾಗಿದೆ. ಇದರಿಂದ ಕೂಡಲೇ ಎಚ್ಚೆತ್ತುಕೊಂಡ ರಮ್ಯಾ ಅಪಾಯದಿಂದ ಪರಾಗಿದ್ದಾರೆ.

ನಂತರ ರಮ್ಯಾ ತಿಂಡಿ ತಯಾರಿಕಾ ಘಟಕಕ್ಕೆ ಕುಲ್ಫಿಯಲ್ಲಿ ಬ್ಲೇಡ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಖಲಿಸದಂತೆ ಎಚ್ಚರವಹಿಸುವಂತೆ ಮನವಿ ಮಾಡಿದ್ದಾರೆ.

 

Share Post

Leave a Reply

Your email address will not be published. Required fields are marked *

error: Content is protected !!