ಹೂಡಿಕೆದಾರರ ಸಮಾವೇಶ ಇತಿಹಾಸ ನಿರ್ಮಾಣ ಮಾಡುವಂಥದ್ದು : ಶೆಟ್ಟರ್

ಹುಬ್ಬಳ್ಳಿ ಸುದ್ದಿ

ಫೆಬ್ರವರಿ, 14 – ಹೂಡಿಕೆ ಸಮಾವೇಶಗಳು ಇಲ್ಲಿಯವರೆಗೆ ಬೆಂಗಳೂರಿಗೆ ಮಾತ್ರ ಸೀಮಿತ ಆಗಿದ್ದವು. ಆದರೆ ಇಂದು ಉತ್ತರ ಕರ್ನಾಟಕ ಹುಬ್ಬಳ್ಳಿಯಲ್ಲಿ ಸಮಾವೇಶ ಆಯೋಜಿಸಲಾಗಿದ್ದು ಇಂದಿ‌ನ ಈ ಸಮಾವೇಶ ಇತಿಹಾಸ ನಿರ್ಮಾಣ ಮಾಡುವಂಥದ್ದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೈಗಾರಿಕಾ ಇಲಾಖೆಯ ಜವಾಬ್ದಾರಿ ಸಿಕ್ಕ ಮೇಲೆ ಟೈರ್ 2ಸಿಟಿಗೆ ಅನುಕೂಲ ಮಾಡುವ ಆಶಯ ನನಗಿತ್ತು. ಕಳೆದ ತಿಂಗಳು ದಾವುಸ್ ನಲ್ಲಿ ನಡೆದ ಸಭೆಯಲ್ಲಿ ಕೈಗಾರಿಕೆ ಸ್ಥಾಪನೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿವೆ ಎಂದರು.

ಕೈಗಾರಿಕೆ ಸ್ಥಾಪನೆಗಳ ದೃಷ್ಟಿಯಿಂದ ಕೆಲ ಕಾನೂನು ತೊಡಕನ್ನ ಈಗಾಗಲೇ ಸರಳೀಕರಣಗೊಳಿಸಲಾಗಿದೆ. ಮುಖ್ಯಮಂತ್ರಿಗಳು ಸಾಕಷ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಕರ್ನಾಟಕ ಮೊದಲಿಂದಲೂ ಕೈಗಾರಿಕಾಸ್ನೇಹಿ. ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗೆಗಳಿಗೆ ಬೇಕಾದ ಮೂಲಸೌಕರ್ಯ ಗಳಿವೆ ಎಂದು ತಿಳಿಸಿದರು.

ಈ ಸಮಾವೇಶಕ್ಕೆ ರಾಜ್ಯ, ಹೊರ ರಾಜ್ಯ ಮಾತ್ರವಲ್ಲದೇ ಹೊರ ದೇಶದಿಂದ ಹೂಡಿಕೆದಾರರು ಬಂದಿದ್ದಾರೆ. ಈಗಾಗಲೇ 30-40 ಹೂಡಿಕೆದಾರರು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಸುಮಾರು 20 ಸಾವಿರ ಕೋಟಿ ರೂ. ಹೂಡಿಕೆ ಇಂದೇ ಆಗಲಿದೆ‌ ಎಂದರು.

ಆದೋನಿ, ಟಾಟಾ ಸೇರಿದಂತೆ ಅನೇಕ ಬೃಹತ್ ಉದ್ದಿಮೆದಾರರು ಮುಂಬರುವ ದಿನದಲ್ಲಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ರಾಜ್ಯ, ಕೇಂದ್ರದಲ್ಲಿ ಒಂದೇ ಸರ್ಕಾರ ಇರೋದ್ರಿಂದ ಸಾಕಷ್ಟು ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.

ಎರಡೇ ಗಂಟೆಯಲ್ಲಿ ಹರಿದುಬಂತು ಸಾವಿರಾರು ಕೋಟಿ ಬಂಡವಾಳ‌

ಹೂಡಿಕೆ ಸಮಾವೇಶ ಆರಂಭವಾದ ಎರಡೇ ಗಂಟೆಗಳಲ್ಲಿ ಸಾವಿರಾರು ಕೋಟಿ ಬಂಡವಾಳ ಹರಿದು ಬಂದಿದ್ದು ಸ್ಥಳದಲ್ಲೇ 9 ಉದ್ದಿಮೆದಾರರು ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡರು.

ರಾಜೇಶ ಎಕ್ಸ್‌ಪೋರ್ಟ್ಸ್ ಲಿ. 50000ಕೋಟಿ ಹೂಡಿಕೆ, 10ಸಾವಿರ ಜನಕ್ಕೆ ಉದ್ಯೋಗ.

ಹೈದ್ರಾಬಾದ ಮೂಲದ
ಸೊನಾಲಿ ಪವರ್ ಪ್ರೈ.ಲಿ ದಾವಣಗೆರೆಯಲ್ಲಿ ಉದ್ಯಮಕ್ಕೆ 4800 ಕೋಟಿ ಬಂಡವಾಳ ಹೂಡಿಕೆ.

ಯಾದಗಿರಿಯಲ್ಲಿ ಉದ್ಯಮ ಆರಂಭಕ್ಕೆ ಭಗೀರಥ ಕೆಮಿಕಲ್ ಇಂಡಸ್ಟೀಸ್ 344 ಕೋಟಿ ಬಂಡವಾಳ, 1000 ಜನರಿಗೆ ಉದ್ಯೋಗ.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ದೆಹಲಿ. ಚಿತ್ರದುರ್ಗದಲ್ಲಿ ಉದ್ದಿಮೆಗೆ 500 ಕೋಟಿ ಬಂಡವಾಳ, 1000 ಜನರಿಗೆ ಉದ್ಯೋಗ.

ಪ್ರಭಂಜನ ಇಂಡಸ್ಟೀಜ್, ಹಾವೇರಿಯಲ್ಲಿ ಟೆಕ್ಸಟೈಲ್ ಉದ್ಯಮಕ್ಕೆ 500 ಕೋಟಿ ಹೂಡಿಕೆ.

ಶಿಲ್ಪಾ ಅಲ್ಬುಮಿಸ್ ಪ್ರೈ.ಲೀ. 221ಕೋಟಿ ಬಂಡವಾಳ 220 ಉದ್ಯೋಗ. ಗುಜರಾತ್ ಅಂಬುಜಾ ಎಕ್ಸಪೋರ್ಟ್
120 ಕೋಟಿ ಬಂಡವಾಳ. ಹೈಟೆಜ್ ಆಟಿಕ್ಯುಲಮ್.ಲಿ. ಕೃಷಿ ಉಪಕರಣ ತಯಾರಿಗೆ
450 ಕೋಟಿ ಬಂಡವಾಳ, 5000ಮಂದಿಗೆ ಉದ್ಯೋಗ. ಎಚ್‌ಬಿಸಿಎಲ್ 680 ಕೋಟಿ ಬಂಡವಾಳ, 79 ಮಂದಿಗೆ ಉದ್ಯೋಗ

Share Post

Leave a Reply

Your email address will not be published. Required fields are marked *

error: Content is protected !!