ವಿಧು ವಿನೋದ್ ಚೋಪ್ರಾ ಕತ್ತೆಗಳು ಎಂದು ಕರೆದಿದ್ದು ಯಾರನ್ನು? ಮತ್ತೆ ಯಾಕೆ ?

90ರ ದಶಕದಲ್ಲಿ ಕಾಶ್ಮೀರ ಕಣಿವೆಯಿಂದ ಹೊರ ಹೋದ ಕಾಶ್ಮೀರಿ ಪಂಡಿತರ ಕುರಿತಾದ ಶಿಕಾರ ಸಿನಿಮಾದ ಬಗ್ಗೆ ನಿರ್ದೇಶಕ ವಿಧು ವಿನೋದ ಚೋಪ್ರಾ ಅವರ ಇತ್ತೀಚಿನ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ‘ತ್ರಿ ಈಡಿಯೆಟ್ಸ್‌’ ಬಿಡುಗಡೆಯಾದ ಮೊದಲ ದಿನ 33 ಕೋಟಿ ಗಳಿಸಿತ್ತು. ಶಿಕಾರ ಸಿನಿಮಾದ ಮೊದಲ ದಿನದ ಗಳಿಕೆ ಕೇವಲ 30 ಲಕ್ಷ. ನನ್ನ ತಾಯಿಯ ನೆನಪಿಗಾಗಿ ನಿರ್ಮಾಣ ಮಾಡಿದ ಈ ಸಿನಿಮಾದ ಮೊದಲ ದಿನದ ಸಂಪಾದನೆ 30 ಲಕ್ಷವಾಗಿತ್ತು. ನಾನು, ಕಾಶ್ಮೀರಿ ಪಂಡಿತರ ನೋವನ್ನು ವ್ಯಾಪಾರೀಕರಣ ಮಾಡಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಇವರೆಲ್ಲಾ ಕತ್ತೆಗಳು’ ಎಂದು ವಿಧು ವಿನೋದ ಚೋಪ್ರಾ ಹೇಳಿದ್ದಾರೆ.

 

 

ಮುಂಬೈನಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಶಿಕಾರ ಸಿನಿಮಾ ಟೀಕಿಸುವವರು ಕತ್ತೆಗಳು ಎಂದು ಹೇಳಿದ್ದಾರೆ.

 

ಶಿಕಾರ ಸಿನಿಮಾ ಕುರಿತಂತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾಶ್ಮೀರಿ ಪಂಡಿತರ ನೋವನ್ನು ವ್ಯಾಪಾರೀಕರಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಿನಿಮಾವನ್ನು ವಿಧು ವಿನೋದ ಚೋಪ್ರಾ ನಿರ್ದೇಶನ ಮಾಡಿದ್ದು ಅಶೋಕ್‌ ಪಂಡಿತ್‌ ನಿರ್ಮಾಣ ಮಾಡಿದ್ದಾರೆ. ಶಿಕಾರ ಸಿನಿಮಾ ಫೆಬ್ರುವರಿ 7ರಂದು ಬಿಡುಗಡೆಯಾಗಿದೆ. ಸಿನಿಮಾ ಕುರಿತಂತೆ ವಿಧು ವಿನೋದ ಚೋಪ್ರಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜೊತೆ ಮುಕ್ತ ಸಂವಾದವನ್ನು ನಡೆಸಿದ್ದರು. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಶಿಕಾರ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ.

 

 

Share Post

Leave a Reply

Your email address will not be published. Required fields are marked *

error: Content is protected !!