Thursday, September 24, 2020
Home ಜಿಲ್ಲೆ ಬಳ್ಳಾರಿ ಇಬ್ಬರ ಕೊಂದ ಪ್ರಭಾವಿ ಸಚಿವರ ಮಗ? ಮುಚ್ಚಿಹಾಕಲು ಪೊಲೀಸರ ಯತ್ನ?

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ಮಾತಾ ವೈಷ್ಣೋದೇವಿ ಭಕ್ತರಿಗೊಂದು ಸಿಹಿಸುದ್ದಿ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ...

ಡ್ರಗ್ಸ್ ಪ್ರಕರಣ : ಕಿರುತೆರೆ ನಟ-ನಟಿ ವಿಚಾರಣೆ

 ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಐಪಿಎಲ್ 2020 : ಚೆನ್ನೈ ಸೂಪರ್...

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ದ.ಕ. ಜಿಲ್ಲೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ...

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

ಮಹಾರಾಷ್ಟ್ರಕಟ್ಟಡ ಕುಸಿತ; 33ಕ್ಕೇರಿದ ಸಾವಿನ ಸಂಖ್ಯೆ

 ಮುಂಬೈ (ಸೆ. 23): ನೆರೆಯ ರಾಜ್ಯವಾದ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು...

ಇಬ್ಬರ ಕೊಂದ ಪ್ರಭಾವಿ ಸಚಿವರ ಮಗ? ಮುಚ್ಚಿಹಾಕಲು ಪೊಲೀಸರ ಯತ್ನ?

ಬಳ್ಳಾರಿ: ಅಧಿಕಾರ ಹಾಗೂ ಹಣದ ಮದದಿಂದ ರಾಜಕಾರಣಿಗಳ ಮಕ್ಕಳು ಮನಸೋ ಇಚ್ಛೆ ನಡೆದುಕೊಳ್ಳುತ್ತಿರುವ ಪ್ರಕರಣ ಇತ್ತೀಚೆಗೆ ಹೆಚ್ಚುತ್ತಿದೆ. ಶಾಂತಿನಗರ ಕಾಂಗ್ರೆಸ್​ ಶಾಸಕ ಹ್ಯಾರಿಸ್​ ಮಗ ಮೊಹಮದ್​ ನಲಪಾಡ್​ ಕಾರು ಅಪಘಾತ ಮಾಡಿದ್ದಾರೆ ಎನ್ನುವ ವಿಚಾರ ಚರ್ಚೆಯಲ್ಲಿರುವಾಗಲೇ ಇದೇ ಮಾದರಿಯ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಅಪಘಾತವೊಂದು ಘಟಿಸಿತ್ತು. ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಅಪಘಾತವನ್ನು ಬಿಜೆಪಿಯ ಪ್ರಭಾವಿ ಸಚಿವರ ಮಗ ಮಾಡಿದ್ದಾನೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.

ಬಳ್ಳಾರಿಯಲ್ಲಿ ಮರಿಯಮ್ಮನ ಹಳ್ಳಿಯಲ್ಲಿ ಕಾರು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ರಸ್ತೆ ಮೇಲೆ ನಡೆದು ಹೋಗುತ್ತಿದ್ದ ರವಿನಾಯ್ಕ್, ಸಚಿನ್ ಹೆಸರಿನ ಇಬ್ಬರು ಮೃತಪಟ್ಟಿದ್ದರು. ಈ ವೇಳೆ ಕಾರು ಚಲಾಯಿಸಿದ್ದು ರಾಜ್ಯ ಸಚಿವರ ಮಗ ಎಂದು ಹೇಳಲಾಗುತ್ತಿದೆ. ಜತೆಗೆ ಪೊಲೀಸರು ಕೂಡ ಈ ಪ್ರಕರಣದ ಸಂಬಂಧ ಮುಗುಮ್ಮಾಗಿರುವುದನ್ನು ಗಮನಿಸಿದರೆ ಘಟನೆಯನ್ನು ಮುಚ್ಚಿಹಾಕುವ ಹುನ್ನಾರದಂತೆ ಬಿಂಬಿತವಾಗುತ್ತದೆ.

ಅಪಘಾತವಾದ ಕಾರು ನ್ಯಾಷನಲ್ ಪಬ್ಲಿಕ್ ಶಾಲೆ ಹೆಸರಲ್ಲಿ ನೋಂದಣಿಯಾಗಿದೆ. ಈ ಕಾರನ್ನು ರಾಜ್ಯ ಬಿಜೆಪಿ ನಾಯಕನ ಮಗ ಓಡಿಸುತ್ತಿದ್ದ ಎಂಬ ಸುದ್ದಿ ಬಳ್ಳಾರಿಯಲ್ಲಿ ಹರಿದಾಡುತ್ತಿದೆ. ಆದರೆ, ಎಫ್​ಐಆರ್​ನಲ್ಲಿ ಈ ಬಗ್ಗೆ ಎಲ್ಲಿಯೂ ಉಲ್ಲೇಖಿತವಾಗಿಲ್ಲ. ಪೊಲೀಸರನ್ನು ಈ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ಸಚಿವರ ಮಗನೇ ಕಾರು ಚಾಲನೆ ಮಾಡುತ್ತಿದ್ದ ಎಂಬುದಕ್ಕೆ ಯಾವುದೆ ಸಾಕ್ಷ್ಯಸಿಕ್ಕಿಲ್ಲ. ಆದರೆ, ಈ ಬಗ್ಗೆ ತುಟಿ ಬಿಚ್ಚದಂತೆ ಪೊಲೀಸ್​ ಇಲಾಖೆಗೂ ರಾಜಕೀಯ ವಲಯದಿಂದ ತೀವ್ರ ಒತ್ತಡ ಬರುತ್ತಿದೆ ಎಂದು ಮೂಲಗಳು ಹೇಳಿವೆ. ಈ ಕಾರಣಕ್ಕಾಗಿಯೇ ನಲಪಾಡ್​ ಮೇಲೆ ಕೇಳಿ ಬಂದ ಅಪಘಾತ ಆರೋಪದ ಸಂಬಂಧ ಬಿಜೆಪಿ ನಾಯಕರು ಸುಮ್ಮನಿದ್ದಾರೆ ಎಂದೂ ಹೇಳಲಾಗುತ್ತಿದೆ.

ಏನಿದು ಪ್ರಕರಣ?:

ಫೆ.10 ಮಧ್ಯಾಹ್ನ 3.30ಕ್ಕೆ ಬಳ್ಳಾರಿ ಮರಿಯಮ್ಮನ ಹಳ್ಳಿಯಲ್ಲಿ ವೇಗವಾಗಿ ಬಂದ ಐಷಾರಾಮಿ ಕಾರೊಂದು ಅಪಘಾತಕ್ಕೆ ಈಡಾಗಿತ್ತು. ಈ ವೇಳೆ ರಸ್ತೆ ಮೇಲೆ ಪಾದಾಚಾರಿಗಳಾದ ರವಿನಾಯ್ಕ್, ಸಚಿನ್ ಮೃತಪಟ್ಟಿದ್ದರು. ಘಟನೆ ನಡೆದು ಮೂರು ದಿನಗಳ ನಂತರ ಈ ಬಗ್ಗೆ ಗುಸುಗುಸು ಆರಂಭವಾಗಿದೆ. ರವಿನಾಯ್ಕ್, ಶಿವಕುಮಾರ್, ರಾಕೇಶ್, ಸಚಿನ್​, ವರುಣ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

TRENDING