ಯುರೋಪ್ ಗೆ ಹೊರಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್

ಈ ವರ್ಷದ ಬಹುನಿರೀಕ್ಷಿತ ಸ್ಯಾಂಡಲ್‍ವುಡ್ ಚಿತ್ರಗಳ ಪೈಕಿ ‘ಯುವರತ್ನ’ ಕೂಡ ಒಂದು. ಸದ್ಯ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಚಿತ್ರದ ಡ್ಯುಯೆಟ್ ಸಾಂಗ್ ಶೂಟಿಂಗ್‍ ಮಾತ್ರ ಬಾಕಿ ಇದೆ. ಈ ಡ್ಯುಯೆಟ್ ಹಾಡಿನ ಚಿತ್ರೀಕರಣಕ್ಕಾಗಿ ಪುನೀತ್ ರಾಜ್‍ಕುಮಾರ್ ಫೆಬ್ರವರಿ 24ರಂದು ಯೂರೋಪ್‍ಗೆ ತೆರಳಲಿದ್ದಾರೆ.

ಇನ್ನೊಂದೆಡೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಹೀರೋ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯಲಿದೆಯಂತೆ. ಇನ್ನು ಈ ಚಿತ್ರದಲ್ಲಿ ಪವರ್ ಸ್ಟಾರ್​ ಪುನೀತ್ ರಾಜ್‍ಕುಮಾರ್​ 44ನೇ ವಯಸ್ಸಿನಲ್ಲಿ ಮತ್ತೆ ಸ್ಟೂಡೆಂಟ್ ಆಗಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಈಗಾಗಲೇ ಭಿನ್ನ ವಿಭಿನ್ನ ಫಸ್ಟ್ ಲುಕ್ ಪೋಸ್ಟರ್​ಗಳು ಹಾಗೂ ರಗ್ಬಿ ಟೀಸರ್​ನಿಂದ ಯುವರತ್ನ ಹೈ ಎಕ್ಸ್‌ಪೆಕ್ಟೇಷನ್ ಮೂಡಿಸಿದೆ. ಸೋನು ಗೌಡ, ಧನಂಜಯ್, ವಸಿಷ್ಠ ಸಿಂಹ, ಸುಧಾರಾಣಿ, ಸಾಯಿ ಕುಮಾರ್ ಮುಂತಾದ ಪೋಷಕ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.

‘ರಾಜಕುಮಾರ’ ಬಳಿಕ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಮತ್ತು ಪುನೀತ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರವಾದ್ದರಿಂದ ನಿರೀಕ್ಷೆ ಹೆಚ್ಚಿದ್ದು, ಇನ್ನೂ ಚಿತ್ರದ ರಿಲೀಸ್ ಡೇಟ್ ಪಕ್ಕಾ ಆಗಿಲ್ಲ.

 

Share Post

Leave a Reply

Your email address will not be published. Required fields are marked *

error: Content is protected !!