ನೂತನ ಸಚಿವ ಶ್ರೀಮಂತ ಪಾಟೀಲರಿಗೆ ನಾಗರಿಕ ಸನ್ಮಾನ

ಬೆಳಗಾವಿ/ಕಾಗವಾಡ ಸುದ್ದಿ

ಫೆಬ್ರವರಿ, 13 – ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ನೂತನ ಸಚಿವ ಸ್ಥಾನ ಸಿಕ್ಕ ಶ್ರೀಮಂತ ಪಾಟೀಲ್ ಅವರನ್ನು ಸ್ವಾಗತಿಸಿ ಮಹಾಸ್ವಾಮಿಗಳು ಸತ್ಕಾರ ಗೌರವ ಅರ್ಪಿಸಿ ಸನ್ಮಾನ ಮಾಡಿ ಆಶಿರ್ವದಿಸಿದರು.

ಬಳಿಕ ಮಾತನಾಡಿದ ನೂತನ ಸಚಿವ ಶ್ರೀಮಂತ ಪಾಟೀಲ್ ಇದೇ ಬಾರಿ ಮೊಟ್ಟಮೊದಲು ಸಚಿವನಾಗಿದ್ದು ನನಗೆ ತುಂಬಾ ಸಂತೋಷವಾಗಿದೆ. ಅದರಂತೆ ಬೆಳಗಾವಿ ಜಿಲ್ಲೆಯ ಕಾಗವಾಡ ಅಥಣಿ ಈ ಭಾಗಗಳಲ್ಲಿ ಸಾಕಷ್ಟು ಬೆಳವಣಿಗೆ ಆಗಬೇಕಾಗಿದೆ ಈ ಭಾಗ ಬಹಳ ಹಿಂದುಳಿದಿದ್ದು ಇದನ್ನು ಉನ್ನತ ಮಟ್ಟಕ್ಕೆ ತಂದು ಈ ಭಾಗದ ಜನರಿಗೆ ಅನುಕೂಲ ಆಗುವಂತೆ ಜನರ ಸೇವೆ ಮಾಡಿ ಶ್ರಮಿಸುತ್ತೆನೆಂದರು.

ಬೇರೆ ಜಿಲ್ಲೆಗಳ ತಾಲೂಕು ಹಾಗೂ ಹಳ್ಳಿಗಳು‌ ಎಷ್ಟೊಂದು ಸುಧಾರಣೆ ಆಗಿದ್ದು ಅದನ್ನು ನೋಡಿದರೆ ಈ ಭಾಗ ಏನೂ ಅಲ್ಲ ಎಂದು ಹೇಳಿದರು.

ಮಹೇಶ ಕುಮಟಳ್ಳಿ ನನ್ನ ಸ್ನೇಹಿತ ಅವರಿಗೂ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರಿಗೆ ಸಿಗಲಿಲ್ಲ. ಸಿಎಂ ಯಡಿಯೂರಪ್ಪ ಅವರು ಅವರಿಗೂ ಜವಾಬ್ದಾರಿಯುತ ಸ್ಥಾನವನ್ನು ನೀಡುವ ಎಂದು ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೆ ವೇಳೆ ಅಭಿಮಾನಿಗಳು ಕಾರ್ಯಕರ್ತರು ಸಚಿವರಿಗೆ ಸಿಹಿ ತಿನ್ನಿಸಿ ಶುಭಕೋರಿದರು.

Share Post

Leave a Reply

Your email address will not be published. Required fields are marked *

error: Content is protected !!