Friday, September 18, 2020
Home ಬೆಂಗಳೂರು ‘’ಕರ್ನಾಟಕ ಬಂದ್’’ ಹಿನ್ನೆಲೆ ನಾಳೆ ಏನೆಲ್ಲಾ ಸೇವೆ ಲಭ್ಯವಿರಲ್ಲ, ಏನೆಲ್ಲಾ ಇರುತ್ತೆ..!?

ಇದೀಗ ಬಂದ ಸುದ್ದಿ

ನಿರೂಪಕ ಅಕುಲ್‍ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ...

ಡ್ರಗ್ ಜಾಲದ ಬೆನ್ನತ್ತಿರುವ ಸಿಸಿಬಿ ಪೊಲೀಸರು ನಟ ಮತ್ತು ನಿರೂಪಕ ಅಕುಲ್‍ಬಾಲಾಜಿ, ಆರ್.ವಿ.ಯುವರಾಜ್ ಸೇರಿ ಮೂರು ಮಂದಿಯನ್ನು ವಿಚಾರಣೆ ನಡೆಸಲು ನೋಟಿಸ್ ಜಾರಿ ಮಾಡಿದೆ. ಕಾಟನ್‍ಪೇಟೆ...

ಲಾಕ್ ಡೌನ್ ನಿಂದ ರಾಜ್ಯ ರಸ್ತೆ ಸಾರಿಗೆ...

ಕೋವಿಡ್-19, ಲಾಕ್ ಡೌನ್ ಕಾರಣದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗೆ 1500 ಕೋಟಿ ರೂ. ನಷ್ಟು ನಷ್ಟವಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ...

ಸರ್ಕಾರಿ ಗೌರವದೊಂದಿಗೆ ಅಶೋಕ್ ಗಸ್ತಿ ಅಂತ್ಯಕ್ರಿಯೆ

ಗುರುವಾರ ರಾತ್ರಿ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ಅಂತ್ಯಸಂಸ್ಕಾರ ಇಂದು ರಾಯಚೂರು ತಾಲೂಕಿನ ಪೋತಗಲ್ ಬಳಿಯ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನದ ಮೂಲಕ ನಡೆಸಲಾಯಿತು.

ಆರ್ ಸಿ ಬಿ ಥೀಮ್ ಸಾಂಗ್ ರಿಲೀಸ್

ಐಪಿಎಲ್ ಗೆ ಇನ್ನು ಉಳಿದಿರುವುದು ಒಂದೇ ದಿನ. ಈ ಮಧ್ಯ ಆರ್ ಸಿಬಿ ತಂಡ ಈ ಬಾರಿಯ ತನ್ನ ಅಧಿಕೃತ ಥೀಮ್ ಸಾಂಗ್ ನ್ನು ಬಿಡುಗಡೆ ಮಾಡಿದ್ದು,ಕನ್ನಡದ ಅಭಿಮಾನಿಗಳಿಗೆ ಈ...

ಅಸ್ಸಾಂ ನಲ್ಲಿ 1.5 ಲಕ್ಷ ದಾಟಿದ ಕೊರೋನಾ...

ಅಸ್ಸಾಂ ನಲ್ಲಿ ಕೊರೋನಾ ವೈರಸ್ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕರೋನವೈರಸ್‌ನಿಂದಾಗಿ 17 ಜನ ಸಾವನ್ನಪ್ಪಿದ್ದು ಮತ್ತು 1,380 ಹೊಸ ಪ್ರಕರಣಗಳು ಅಸ್ಸಾಂನಲ್ಲಿ ವರದಿಯಾಗಿದೆ. ಇದರೊಂದಿಗೆ, ಅಸ್ಸಾಂನಲ್ಲಿ ಈಗ ಒಟ್ಟು...

‘’ಕರ್ನಾಟಕ ಬಂದ್’’ ಹಿನ್ನೆಲೆ ನಾಳೆ ಏನೆಲ್ಲಾ ಸೇವೆ ಲಭ್ಯವಿರಲ್ಲ, ಏನೆಲ್ಲಾ ಇರುತ್ತೆ..!?

ಬೆಂಗಳೂರು: ರಾಜ್ಯದ ಖಾಸಗಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂಬ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಸಂಘಟನೆ ಒಕ್ಕೂಟದಿಂದ ನಾಳೆ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರಿಗೆ ಬಂದ್​ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ಹಲವಾರು ಸಂಘಟನೆಗಳು ಬಂದ್​​ಗೆ ಬೆಂಬಲ ಸೂಚಿಸಿವೆ. ಬಂದ್​​ ಹಿನ್ನೆಲೆ ನಾಳೆ ಏನೆಲ್ಲಾ ಸೇವೆ ಲಭ್ಯವಿರಲ್ಲ, ಏನೆಲ್ಲಾ ಇರುತ್ತೆ ಅನ್ನೋ ಮಾಹಿತಿ ಇಲ್ಲಿದೆ;

ಲಾರಿ ಮಾಲೀಕರ ಸಂಘ, ಓಲಾ, ಉಬರ್, ಟ್ಯಾಕ್ಸಿ, ಕ್ಯಾಬ್, ಆಟೋ, ಸಾರಿಗೆ ಸಂಘಟನೆಗಳು ಬಂದ್​​ಗೆ ಬೆಂಬಲ ಸೂಚಿಸಿದೆ. ಹೀಗಾಗಿ ನಾಳೆ ಬೆಳಗ್ಗೆಯಿಂದ ಬೆಂಗಳೂರಿನಲ್ಲಿ ಓಲಾ, ಊಬರ್ ಟ್ಯಾಕ್ಸಿ ಹಾಗೂ ಆಟೋಗಳ ಸೇವೆ ಸಿಗಲ್ಲ. ಎಐಡಿಯುಸಿ, ಸಿಐಡಿಯು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಹಲವು ಸಂಘಟನೆಗಳು ಬಂದ್​ಗೆ ಬೆಂಬಲ ನೀಡಿವೆ.

ಬ್ಯಾಂಕ್ ನೌಕರರು, ಹೋಟೆಲ್ ಮಾಲೀಕರು ಸೇರಿದಂತೆ ಹಲವು ಸಂಘಟನೆಗಳು ಬಂದ್​​ ಬಗ್ಗೆ ಇನ್ನೂ ತಟಸ್ಥ ನಿಲುವು ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾಳೆ ಹೋಟೆಲ್​​​​ ಹಾಗೂ ಬ್ಯಾಂಕ್ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಮೆಡಿಕಲ್ ಹಾಗೂ ತುರ್ತು ಸೇವೆಗಳು ಎಂದಿನಂತೆ ಲಭ್ಯವಿರಲಿದೆ. ಕೆಎಸ್‌ಆರ್​ಟಿಸಿ ಹಾಗೂ ಬಿಎಂಟಿಸಿ ನೌಕರರು ಬಂದ್​ಗೆ ನೈತಿಕ ಬೆಂಬಲ ಮಾತ್ರ ಸೂಚಿಸಿದ್ದು, ಬಸ್​ ಸಂಚಾರ ಎಂದಿನಂತೆ ಇರಲಿದೆ. ಮೆಟ್ರೋ ನೌಕರರು ಬಂದ್​ಗೆ ಬೆಂಬಲ ನೀಡಿಲ್ಲ. ಹೀಗಾಗಿ ಮೆಟ್ರೋ ರೈಲುಗಳು ಎಂದಿನಂತೆ ಓಡಾಡಲಿವೆ.

ಕರವೇ ನಾರಾಯಣ ಗೌಡ, ಕರ್ನಾಟಕ ಹೋರಾಟಗಾರ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಬಂದ್​​ಗೆ ವಿರೋಧ ವ್ಯಕ್ತಪಡಿಸಿದ್ದು, ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ಕನ್ನಡಿಗರ ಉದ್ಯೋಗಕ್ಕಾಗಿ 4-11- 2019ರಿಂದ ಧರಣಿ ಸತ್ಯಾಗ್ರಹ ನಡೆಸಲಾಗ್ತಿದೆ. ಸತ್ಯಾಗ್ರಹ ನೂರು ದಿನ ಪೂರೈಸಿದ ಹಿನ್ನೆಲೆ ಸಂಪೂರ್ಣ ಕರ್ನಾಟಕ ಬಂದ್ ಮಾಡಲು ಕನ್ನಡಪರ ಸಂಘಟನೆ ಮುಖಂಡ ನಾಗೇಶ್ ಕರೆ ಕೊಟ್ಟಿದ್ದಾರೆ. ಈ ಕುರಿತು ಮಾತನಾಡಿರೋ ಅವರು, ಈಗಾಗಲೇ 20ಕ್ಕೂ ಹೆಚ್ಚು ಸ್ವಾಮೀಜಿಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂದ್ ಸಂಪೂರ್ಣ ಯಶಸ್ವಿ ಮಾಡ್ತೀವಿ ಎಂದಿದ್ದಾರೆ. 13 ರಂದು ಅಖಂಡ ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ. ಈಗಾಗಲೇ 400ಕ್ಕೂ ಹೆಚ್ಚು ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ. ಬಂದ್ ದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದಾರೆ. ಈಗಾಗಲೇ ಹೋಟೆಲ್ ಮಾಲೀಕರು, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು, ಸೆಲಬ್ರೆಟಿಗಳು, ಧಾರ್ಮಿಕ ಮುಖಂಡರುಗಳು, ಹಿಂದೂಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಬಂದ್ ಯಶಸ್ವಿಯಾಗುತ್ತೆ. ಎಲ್ಲಾ ಸಂಘಟನೆಗಳು ರಾಜ್ಯದ ಕನ್ನಡಿಗರ ಭವಿಷ್ಯಕ್ಕಾಗಿ ಒಂದಾಗ್ತಿದ್ದೇವೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಎಷ್ಟು ಪ್ರಾಶಸ್ತ್ಯ ಸಿಗಬೇಕೆಂದು ತಿಳಿಯಲು 1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಮಾಜಿ ಕೇಂದ್ರ ಸಚಿವೆ ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಗೋಪಾಲಕೃಷ್ಣ ಅಡಿಗ ಸೇರಿದಂತೆ ಇತರೆ 4 ಮಂದಿ ಇದ್ದ ಈ ಸಮಿತಿ 1986ರಲ್ಲಿ ಅಂತಿಮ ವರದಿ ಸಲ್ಲಿಸಿತು. ವರದಿಯಲ್ಲಿ ರಾಜ್ಯದ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ ಕೊಡಬೇಕು. ಖಾಸಗಿ ಕಂಪನಿಗಳಲ್ಲೂ ಮೀಸಲಾತಿ ನಿರ್ದಿಷ್ಟಪಡಿಸಬೇಕು. ಹೀಗೆ ಒಟ್ಟು 56 ಶಿಫಾರಸುಗಳನ್ನು ಸಮಿತಿ ಸರ್ಕಾರದ ಮುಂದಿಟ್ಟಿತ್ತು. ಇದರಲ್ಲಿ ರಾಜ್ಯ ಸರ್ಕಾರ 40 ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಉಳಿದ ಹಲವು ಪ್ರಮುಖ ಶಿಫಾರಸುಗಳು ಇನ್ನೂ ಹಾಗೆ ಉಳಿದಿವೆ. ಸರೋಜಿನಿ ಮಹಿಷಿ ವರದಿಯನ್ನು ಸಂಪೂರ್ಣವಾಗಿ ಜಾರಿ ಮಾಡಬೇಕೆಂದು ದಶಕಗಳಿಂದ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿಕೊಂಡು ಬಂದಿವೆ.

TRENDING