ಮೆಟ್ರೋ ಪ್ರಯಾಣಿಕರ ಮನೆ ಬಾಗಿಲಿಗೆ ಬಿಎಂಟಿಸಿ ಮೆಟ್ರೋ ಫೀಡರ್ ಬಸ್

ಸಿಲಿಕಾನ್ ಸಿಟಿ ದೊಡ್ಡ ಸಮಸ್ಯೆ ಅಂದ್ರೆ ಟ್ರಾಫಿಕ್ ಜಾಮ್ , ಅದರ ಜೊತೆಗೆ ಈಗ ಹೆಚ್ವುತ್ತಿರುವ ವಾಯುಮಾಲಿನ್ಯ. ಇದರಿಂದ ಜನ ಪಾರಾಗಲು ಮೆಟ್ರೋ ನ ಮೊರೆ ಹೋಗ್ತಿದ್ದಾರೆ. ಆದ್ರೆ ಮೆಟ್ರೊ ಸ್ಟೇಷನ್ ಗೆ ಹೋಗ್ಬೇಕು ಅಂದ್ರೆ ಸ್ಪಲ್ಪ ಪರದಾಡಬೇಕು. ಆಟೋದವರನ್ನ ಮೆಟ್ರೋ ಸ್ಟೇಷನ್ ಗೆ ಬರ್ತೀರ ಅಂದ್ರೆ 50,100 ಕೊಡಿ‌ ಅನ್ನೋರೆ ಜಾರ್ಸಿ ಮೀಟರ್ ಹಾಕಿ ಆಟೋ ಓಡಿಸೋರೆ ಕಮ್ಮಿಯಾಗಿದ್ದಾರೆ. ಹಾಗಾಗಿ ಜನರ ಈ ಸಮಸ್ಯೆಗಳನ್ನ ಅರಿತಿರುವ ಬಿಎಂಟಿಸಿ ಎಲ್ಲಾ ಮೆಟ್ರೋ ಸ್ಟೇಷನ್ ಗಳಲ್ಲಿ ಮೆಟ್ರೋ ಫೀಡರ್ ಬಸ್ ಗಳನ್ನ ಹಾಕಲು ಸಿದ್ದತೆ ಮಾಡಿಕೊಳ್ಳುತ್ತಿದೆ.

90 ‌ಎಲೆಕ್ಟ್ರಿಲ್ ಮೆಟ್ರೋ ಫೀಡರ್ ಬಸ್ ಗಳನ್ನ ಖರೀದಿ ಮಾಡಲು ಬಿಎಂಟಿಸಿ ಮುಂದಾಗಿದ್ದು‌ ಟೆಂಡರ್ ಕರೆದಿದೆ. ಈ ಬಸ್ ಗಳು ಎಲ್ಲಾ ಮೆಟ್ರೋ ಸ್ಟೇಷನ್ ಗಳಲ್ಲಿ ಇರಲಿದ್ದು ಆ ನಗರದ ಎಲ್ಲಾ ಏರಿಯಾಗಳಿಗೆ ಹೋಗಲಿದೆ. ಮೆಟ್ರೋ ಸ್ಟೇಷನ್ ಗೆ ಬರುವ ಜನರನ್ನ ಅವರ ಏರಿಯಾಗಳಿಂದಲೆ ಪಿಕ್ ಮಾಡಿಕೊಂಡು ಮೆಟ್ರೋ ಸ್ಟೇಷನ್ ಗೆ ಬಿಡಲಿವೆ, ಮತ್ತೆ ಮೆಟ್ರೋದಿಂದ ಬಂದಿಳಿದ ಜನರನ್ನ ಅವರ ಏರಿಯಾಗಳಿಗೆ ತಲುಪಿಸಲಿದೆ‌.

ನಗರದ ಪ್ರತಿಯೊಂದು ಏರಿಯಾಗಳಿಗೆ ಹೋಗುವ ಈ ಬಸ್ ಗಳು‌ 9 ಮೀಟರ್‌ ಉದ್ದವಿದ್ದು, 34 ಜನ ಕುಳಿತುಕೊಳ್ಳಬಹುದಾಗಿದೆ. ಜನರು ಅವರ ಸ್ವಂತ ವಾಹನಗಳನ್ನ ಬಳಸದೆ ಸಾರ್ವಜನಿಕ ವಾಹನಗಳನ್ನ ಬಳಸಬೇಕು. ಮತ್ತೆ ವಾಯುಮಾಲಿನ್ಯ ಕಡಿಮೆಯಾಗಬೇಕು ಅನ್ನೋದು ಈ ಹೊಸ ಯೋಜನೆಯ ಉದ್ದೇಶವಾಗಿದೆ. ಮೊದಲಿಗೆ 90 ಎಲೆಕ್ಟ್ರಿಕ್ ಬಸ್ಗಳನ್ನ ರಸ್ತೆಗಿಳಿಸುತ್ತಿದ್ದು, ಜನರ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ಬಿಡಲಾಗುತ್ತದೆ ಅಂತ ಬಿಎಂಟಿಸಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಿತ್ ಅವರು ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!