ಸಚಿವ ಸ್ಥಾನ ಸಿಗದ ಬೇಸರವಿದ್ದರೂ ಕೂಡ ನೂತನ ಸಚಿವರಿಗೆ ಶುಭಾಶಯ ಕೋರಿದ ಎಂಟಿಬಿ

ಬೆಂಗಳೂರು: ಸಚಿವ ಸ್ಥಾನ ಸಿಗದ ಬೇಸರವಿದ್ದರೂ ಕೂಡ ಎಂಟಿಬಿ ನಾಗರಾಜ್ ಸಂಪುಟ ರಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಪುಟದ ನೂತನ ಸಚಿವರಿಗೆ ಶುಭಾಶಯ ಕೋರಿದ್ರು.

ಈ ವೇಳೆ ಮಾತನಾಡಿದ ಎಂಟಿಬಿ, ಸಂಪುಟ ರಚನೆ ಕಾರ್ಯಕ್ರಮಕ್ಕೆ ನಮಗೂ ಆಹ್ವಾನ ನೀಡಿದ್ದಾರೆ ನಾನು ಹೋಗುತ್ತೇನೆ. ನಮ್ಮಲ್ಲಿ ಯಾವುದೇ ಅಸಮಧಾನವಿಲ್ಲ. ಈಗ ಸಚಿವರಾಗುತ್ತಿರುವಂತಹ ನಮ್ಮ ಸ್ನೇಹಿತರು ಸಹ ಬಹಳ ದಿನಗಳಿಂದ ತುಂಬಾ ನೊಂದಿದ್ದರು. ಸಾಕಷ್ಟು ಕಷ್ಟ ಪಟ್ಟಿದ್ದಾರೆ ಇಂದು ಅವರು ಸಚಿವ ಸಂಪುಟದಲ್ಲಿ ಸೇರ್ಪಡೆಯಾಗುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.

ಅಲ್ಲದೇ, ನಮಗೆ ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ನಮಗೂ ಆದಷ್ಟು ಬೇಗ ಒಳ್ಳೆಯ ಸ್ಥಾನಮಾನ ಕೊಡುತ್ತಾರೆ ಎನ್ನುವಂತಹ ನಂಬಿಕೆ ಇದೆ. ಕ್ಷೇತ್ರದ ಜನತೆಗೆ ಯಾರಿಗೂ ನೋವಿಲ್ಲ ಅದ್ರೆ ಇಂದಿನ ಸಚಿವ ಸಂಪುಟದಲ್ಲಿ ನಾನು ಸಹ ಸೇರ್ಪಡೆಯಾಗಬೇಕಿತ್ತು ಎನ್ನುತ್ತಿದ್ದಾರೆ. ನನ್ನನ್ನು ಸಹ ಮುಂದಿನ ದಿನಗಳಲ್ಲಿ ಸಚಿವನನ್ನಾಗಿ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!