ಹೈಕಮಾಂಡ್ ಯಾರ್ಯಾರನ್ನು ಸಚಿವರಾಗಿ ಮಾಡ್ತಾರೋ ಗೊತ್ತಿಲ್ಲ ;ಶಾಸಕ ನೆಹರೂ ಓಲೇಕಾರ್

ಬೆಂಗಳೂರು: ಹೈಕಮಾಂಡ್ ಯಾರ್ಯಾರನ್ನು ಸಚಿವರಾಗಿ ಮಾಡ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ಶಾಸಕ ನೆಹರೂ ಓಲೇಕಾರ್ ಇಂದು ಹೇಳಿದರು. ನಗರದಲ್ಲಿರುವ ಸಿಎಂ ಬಿಎಸ್​ವೈ ನಿವಾಸದ ಬಳಿ ಮಾತನಾಡಿದ ಅವರು, ಇನ್ನೂ ಯಾರದ್ದೂ ಫೈನಲ್ ಆಗಿಲ್ಲ, ನಾವೆಲ್ಲ ಕಾಯುತ್ತಿದ್ದೇವೆ. ಇನ್ನೂ ಯಾರಿಗೆ ಕೊಡ್ತಾರೆ ಅಂತ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ನಾನೂ ಕೂಡಾ ಸಚಿವ ಸ್ಥಾನಕ್ಕೆ ಕೇಳಿದ್ದೇನೆ. ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಈ ಸಲ ಆಗದಿದ್ದರೂ ಮುಂದೆ ಪುನಾರಚನೆ ವೇಳೆ ಅವಕಾಶ ಸಿಗುವ ಭರವಸೆ ಇದೆ ಎಂದು ತಿಳಿಸಿದರು.

ಸದ್ಯ 10 ಜನ ನೂತನ ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. ಆದರೆ, ಪಕ್ಷದ ಶಾಸಕರಿಗೆ ಯಾರ್ಯಾರಿಗೆ ಅಂತ ಫಿಕ್ಸ್ ಆಗಿಲ್ಲ ಎಂದು ಶಾಸಕ ನೆಹರೂ ಓಲೇಕಾರ್ ಅವರು ನುಡಿದರು…!

Share Post

Leave a Reply

Your email address will not be published. Required fields are marked *

error: Content is protected !!