ಅಸಮಾಧಾನದ ನಡುವೆಯೂ ನಾಳೆ ಪಂಚಾಂಗದ ಪ್ರಕಾರ ಸಚಿವ ಸಂಪುಟ ವಿಸ್ತರಣೆ

ಸಚಿವ ಸ್ಥಾನ ವಿಚಾರವಾಗಿ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಸೋತ ಶಾಸಕರಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂದು ಮೂಲ ಬಿಜೆಪಿಗರಲ್ಲಿ ಈಗಾಗಲೇ ಶೀತಲ ಸಮರ ಆರಂಭವಾಗಿದೆ. ಈ ಅಸಮಾಧಾನದ ನಡುವೆಯೇ ನಾಳೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ.

ಹೌದು ನಾಳೆ ಪಂಚಾಂಗದ ಪ್ರಕಾರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಆದರೆ ಯಾರು ಸಚಿವರಾಗುತ್ತಾರೆ ಎಂಬುದನ್ನು ಮಾತ್ರ ಸಿಎಂ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿರುವ ಸಿಎಂ, ನಾಳೆ ಸಚಿವ ಸಂಪುಟ ವಿಸ್ತರಣೆಯಾಗುವುದು ನಿಜ. ಸಚಿವರ ಪಟ್ಟಿಯನ್ನು ಸಂಜೆ ಹೈಕಮಾಂಡ್ ರವಾನಿಸಲಿದೆ ಎಂದು ಹೇಳಿದ್ದಾರೆ.

ಇನ್ನು ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ ಹಾಗೂ ಯೋಗೀಶ್ವರ್‌ಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಬಿಜೆಪಿ ಮೂಲ ಶಾಸಕರಲ್ಲೇ ಅಸಮಾಧಾನ ಇರುವುದರಿಂದ ಈ ಮೂವರ ಹೆಸರನ್ನು ಸಿಎಂ ತಡೆ ಹಿಡಿದಿದ್ದಾರೆ ಎನ್ನಲಾಗುತ್ತಿದೆ.

 

Share Post

Leave a Reply

Your email address will not be published. Required fields are marked *

error: Content is protected !!