10 ಶಾಸಕರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ : ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು ರಾಜ್ಯ ರಾಜಕೀಯ

ಫೆಬ್ರವರಿ, 05 – ನಾಳೆಯ ಸಂಪುಟ ವಿಸ್ತರಣೆಯಲ್ಲಿ ಹತ್ತು ಶಾಸಕರಿಗೆ ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಸುದ್ದಿಗಾರರೊಡನೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ಕುರಿತು ಮಹತ್ವದ ವಿಚಾರಗಳನ್ನು ತಿಳಿಸಿದರು.

ಹತ್ತು ಶಾಸಕರನ್ನು ಮಂತ್ರಿಮಂಡಲಕ್ಕೆ ತೆಗದುಕೊಳ್ಳಿ. ಬಳಿಕ ದೆಹಲಿಗೆ ಬನ್ನಿ ಮತನಾಡೋಣ ಎಂದು ವರಿಷ್ಠರು ತಿಳಿಸಿದ್ದಾರೆ. ಉಮೇಶ್ ಕತ್ತಿಯವರನ್ನು ನೂರಕ್ಕೆ ನೂರು ಸಂಪುಟಕ್ಕೆ ತೆಗೆದುಕೊಳ್ಳಲಾಗುವುದು. ಈ ಭರವಸೆಯನ್ನು ಅವರಿಗೂ ಕೊಟ್ಟಿದ್ದೇನೆ. ಅವರನ್ನು ಮಂತ್ರಿ ಮಾಡೇ ಮಾಡ್ತೀವಿ ಎಂದ ಅವರು ನಾಳೆಯೇ ಅವರು ಸಂಪುಟಕ್ಕೆ ಸೇರಬೇಕಿತ್ತು ಎಂದು ಹೇಳುವ ಮೂಲಕ ಸಧ್ಯಕ್ಕೆ ಉಮೇಶ್ ಕತ್ತಿಯವರಿಗೆ ಮಂತ್ರಿ ಸ್ಥಾನ ಇಲ್ಲ‌ ಎಂಬ ಸುಳಿವು ನೀಡಿದರು.

ಹಿಂದೆ ರಾಜೀನಾಮೆ ನೀಡಿ ಬಂದಿರುವವರನ್ನು ಬಿಟ್ಟು ಬೇರೆಯವರನ್ನು ಸಧ್ಯಕ್ಕೆ ಮಂತ್ರಿ ಮಾಡುವುದು ಬೇಡ ಎಂದು ಹೇಳಿದ್ದಾರೆ. ದೆಹಲಿಗೆ ಹೋಗಿ ಬಂದ ಮೇಲೆ ಉಳಿದವರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ‌ ಎಂದರು.

ಉಮೇಶ್ ಕತ್ತಿಯವರನ್ನು ಮಂತ್ರಿ ಮಾಡುವುದು ನಿಶ್ಚಿತ ಎಂದು ಪುನರುಚ್ಚರಿಸಿದರು. ಮಹೇಶ್ ಕುಮಟಳ್ಳಿ ಅವರನ್ನು ಮಂತ್ರಿ ಮಾಡಲು ಕಷ್ಟವಾಗುತ್ತದೆ ಎಂದು ಹೇಳುವ ಮೂಲಕ ಮಂತ್ರಿ ಸ್ಥಾನ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು ಅವರಿಗೆ ಬೇರೆ ಏನಾದರು ದೊಡ್ಡ ಜವಾಬ್ದಾರಿ ನೀಡಲು ಪ್ರಯತ್ನ ಮಾಡುತ್ತೇನೆ ಎಂದರು.

Share Post

Leave a Reply

Your email address will not be published. Required fields are marked *

error: Content is protected !!