ಹೈದರಾಬಾದ್ ಕರ್ನಾಟಕ ಶಾಸಕರ ಬಳಿಕ ಅಸಮಾಧಾನ ಹೊರಹಾಕುತ್ತಿರುವ ಕರಾವಳಿ ಶಾಸಕರು

ಗುರುವಾರದಂದು ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸಂಪುಟ ವಿಸ್ತರಣೆ ಮಾಡುತ್ತಿದ್ದು, ಸಚಿವರು ಯಾರಾಗಲಿದ್ದಾರೆ ಎಂಬ ಮಾಹಿತಿ ಇನ್ನೂ ಹೊರ ಬೀಳದಿರುವ ಮಧ್ಯೆ ಸಂಭವನೀಯ ಸಚಿವರ ಪಟ್ಟಿಯನ್ನು ಆಧರಿಸಿ ಸಚಿವ ಸ್ಥಾನಾಕಾಂಕ್ಷಿ ಶಾಸಕರುಗಳು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಅದರಲ್ಲೂ ಚುನಾವಣೆಯಲ್ಲಿ ಪರಾಭವಗೊಂಡ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಶಾಸಕರುಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಗೆದ್ದವರನ್ನಷ್ಟೇ ಸಚಿವ ಸ್ಥಾನಕ್ಕೆ ಪರಿಗಣಿಸಿ ಎಂಬ ಒತ್ತಡವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಹೇರುತ್ತಿದ್ದಾರೆ.

ಸೋಮವಾರದಂದು ಸಭೆ ನಡೆಸಿದ ಹೈದರಾಬಾದ್ಕರ್ನಾಟಕ ಭಾಗದ ಶಾಸಕರುಗಳು ತಮ್ಮಲ್ಲಿ ಯಾರಾದರೊಬ್ಬರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿ ಎಂಬ ಮನವಿ ಇಟ್ಟಿದ್ದರು. ಇದೀಗ ಕರಾವಳಿ ಭಾಗದ ಶಾಸಕರುಗಳು ಸಹ ಇಂತಹುದೇ ಬೇಡಿಕೆ ಇಟ್ಟುಕೊಂಡು ಸಭೆ ನಡೆಸಲು ಮುಂದಾಗಿದ್ದಾರೆನ್ನಲಾಗಿದೆಇದು ಮುಖ್ಯಮಂತ್ರಿ ಯಡಿಯೂರಪ್ಪನವರ ತಲೆಬಿಸಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!