ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು ರಾಜಕೀಯ ಸುದ್ದಿ

ಫೆಬ್ರವರಿ, 02 – ಸಿಎಂ ಬಿಎಸ್ ವೈ ಅವರು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ಸ್ವಲ್ಪ ಬ್ಯಾಲೆನ್ಸ್ ಇದೆ. ಅದನ್ನು ಸಹ ಈಡೇರಿಸ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಸಕ ಎಸ್.ಟಿ ಸೋಮಶೇಖರ್ ಹೇಳಿದರು.

ಸುದ್ದಿಗಾರರೊಡನೆ ಮಾತನಾಡಿದ ಅವರಿ ನನಗೆ ಬೆಂಗಳೂರು ಅಭಿವೃದ್ದಿ ಖಾತೆ ಪಡೆಯಿರಿ ಅಂತ ಕ್ಷೇತ್ರದ ಜನರ ಒತ್ತಾಯ ಇದೆ. ಆದ್ರೆ ನಾನು ಸಿಎಂ ಗೆ ಇದೇ ಖಾತೆ ಬೇಕು ಅಂತಾ ಪಟ್ಟು ಹಿಡಿದಿಲ್ಲ ಎಂದರು.

ನಮ್ಮ ಜೊತೆ ಮಾತುಕತೆ ಆಗುವಾಗಲೂ ಖಾತೆಗಳ ಬಗ್ಗೆ ಚರ್ಚೆ ಆಗಿಲ್ಲ. ಯಾವ ಖಾತೆ ಬೇಕು ಎಂದು ನನ್ನ ಕೇಳಿದ್ರೆ, ಮೊದಲ ಆದ್ಯತೆ ಬೆಂಗಳೂರು ಅಭಿವೃದ್ಧಿ ಖಾತೆ ಕೇಳ್ತೇನೆ ಎಂದು ಹೇಳಿದರು.

ಆರ್.ಶಂಕರ್ ಅವರದ್ದು ಯಾವುದೇ ಸಮಸ್ಯೆ ಆಗುವುದಿಲ್ಲ. ಆರ್ ಶಂಕರ್ ಅವರನ್ನ ಮೇ ತಿಂಗಳಲ್ಲಿ ಎಂ.ಎಲ್.ಸಿ ಮಾಡಿ ಮಂತ್ರಿ ಮಾಡುವ ಭರವಸೆಯನ್ನ ಸಿಎಂ ನೀಡಿದ್ದಾರೆ. ಹೀಗಾಗಿ ಆರ್ ಶಂಕರ್ ಗೆ ಸಮಸ್ಯೆ ಆಗೋದಿಲ್ಲ ಎಂದರು.

Share Post

Leave a Reply

Your email address will not be published. Required fields are marked *

error: Content is protected !!