ಸಾವಿರಾರು ಕೋಟಿ ರೂಪಾಯಿ ಹಣ ಕರ್ನಾಟಕಕ್ಕೆ ಹರಿದು ಬರಲಿದೆ ;ಸಿಎಂ ಯಡಿಯೂರಪ್ಪ

ಬೆಂಗಳೂರು: ದಾವೋಸ್​​ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಿಂದ ರಾಜ್ಯಕ್ಕೆ ಲಭಿಸಲಿರುವ ಪ್ರಯೋಜನಗಳ ಬಗ್ಗೆ ಸಿಎಂ ಬಿ.ಎಸ್​​ ಯಡಿಯೂರಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭ ಮಾಡಲು ವರ್ಲ್ಡ್ ಎಕನಾಮಿಕ್ ಫೋರಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನಾವೆಲ್ಲಾ ದಾವೋಸ್​​ಗೆ ಹಿಂಜರಿಕೆಯಿಂದ ಹೋಗಿದ್ದೆವು. ಆದ್ರೆ ಹಿಂಜರಿಕೆ ಮಾಯವಾಗಿ ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ವಿಚಾರಗಳಲ್ಲಿ ಸಮ್ಮೇಳನ ಅನುಕೂಲವಾಯ್ತು ಎಂದು ಸಿಎಂ ತಿಳಿಸಿದ್ರು.

ಸಾವಿರಾರು ಕೋಟಿ ರೂಪಾಯಿ ಹಣ ಕರ್ನಾಟಕಕ್ಕೆ ಹರಿದು ಬರಲಿದೆ. ಏರಸ್ಲೆಲ್ಲೋರ್ ಮಿತ್ತಲ್, ಡೊಮ್ಯಾಕ್, ದಾಲ್ಮಿಯಾ , ಸೆಸ್ಟ್ಲೆಯಂಥ ದೊಡ್ಡ ದೊಡ್ಡ ಕಂಪನಿಗಳು ಬಂಡವಾಳ ಹೂಡಲು ಒಪ್ಪಿವೆ. ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಯಲು ಸಹಕಾರಿ ಎಂದರು. ಇನ್ನು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸುಲಭ ದರದಲ್ಲಿ ಆರೋಗ್ಯ ಇಲಾಖೆಯ ಮುಖಾಂತರ ಔಷಧಿಯನ್ನು ಸರಬರಾಜು ಮಾಡಲು ಡ್ಯಾನಿಷ್‍ನ ಪ್ರಸಿದ್ಧ ಔಷಧ ತಯಾರಿಕಾ ಕಂಪನಿಯಾದ ನೋವೋ ನಾರ್‍ಡಿಸ್ಕ್ ಮುಂದಾಗಿದೆ. ನೋವೋ ನಾರ್‍ಡಿಸ್ಕ್ ಅಧ್ಯಕ್ಷ ಮತ್ತು ಸಿಇಒ ಫ್ರುಯರ್ ಗಾರ್ಡ್ ಜಾರ್‍ಜೆನ್ಸನ್ ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ರು.

ಮುಂದಿನ ಮೂರು ವರ್ಷಗಳಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿರುವಂತೆ ಮಾಡುತ್ತೇನೆ. ನವೆಂಬರ್​​ನಲ್ಲಿ ನಡೆಯುವ ಬಂಡವಾಳ ಹೂಡಿಕೆಗೆ ಉದ್ಯಮಿಗಳನ್ನು ಆಹ್ವಾನಿಸಲು ಆರ್ಥಿಕ ಶೃಂಗ ಸಭೆ ವೇದಿಕೆ ಆಯ್ತು. ಬಹಳಷ್ಟು ಉದ್ಯಮಿಗಳಿಗೆ ಒಂದು ಸಾಮಾನ್ಯ ಅಹವಾಲು ಎಂದರೆ ಭೂಮಿ ಖರೀದಿ ಬಗ್ಗೆ ಇರುವ ಅಡಚಣೆಗಳು. ಈ ಬಗ್ಗೆ ಕಾನೂನು ತಿದ್ದುಪಡಿ ಮಾಡುವ ಭರವಸೆಯನ್ನ ಅವರಿಗೆ ಕೊಟ್ಟಿದ್ದೇವೆ. ಕೈಗಾರೀಕರಣ ನೀತಿ ಸರಳೀಕರಣ ಮಾಡುತ್ತೇವೆ. ರಾಜ್ಯದಲ್ಲಿ ಇರುವ ಔದ್ಯೋಗಿಕ ವಾತಾವರಣದ ಬಗ್ಗೆ ಉದ್ದಿಮೆದಾರರಿಗೆ ತಿಳಿಸಿದ್ದೇವೆ. ಲೂಲೂ ಕಂಪನಿ 2000 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಪ್ಪಿದೆ. ಇದರಿಂದ ತರಕಾರಿ, ಹಣ್ಣು, ಹೂ, ಇತರೆ, ಬೆಳೆಗಳನ್ನು ರೈತರು ನಗರಗಳಿಗೆ ಸಾಗಾಣಿಕೆ ಮಾಡಲು ನೆಟವರ್ಕ್ ನಿರ್ಮಾಣ ಮಾಡುತ್ತದೆ. ರೈತರು ಬೆಳೆದ ಬೆಳೆಗಳು ಹಾಳಾಗದೇ ಮಾರುಕಟ್ಟೆಗೆ ಬೇಗ ತಲುಪಿಸಲು ಇದು ಅನುವಾಗುತ್ತದೆ ಎಂದು ಬಿಎಸ್​ವೈ ತಿಳಿಸಿದ್ರು.

 

Share Post

Leave a Reply

Your email address will not be published. Required fields are marked *

error: Content is protected !!