ಇಬ್ಬರು ಹಿರಿಯ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದಲ್ಲಿ 8 ಪದಕ : ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಮಾದಯ್ಯ ಅವರಿಗೆ 2 ಚಿನ್ನ, 2ಕಂಚು, 1ಬೆಳ್ಳಿ ಪದಕ, ನಟರಾಜಪ್ಪ ಅವರಿಗೆ 3 ಕಂಚಿನ ಪದಕ

ಚಾಮರಾಜನಗರ/ಕೊಳ್ಳೇಗಾಲ ಸುದ್ದಿ

ಜನವರಿ.20 – ಇತ್ತಿಚೆಗೆ ಕೇರಳದ ಕೊಚ್ಚಿಕೋಡು( ಕ್ಯಾನನೂರು) ನಲ್ಲಿ ನಡೆದ
ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕೊಳ್ಳೇಗಾಲ ತಾಲೂಕಿನ ಹಿರಿಯ ಕ್ರೀಡಾಪಟುಗಳಿಬ್ಬರು  ಪಾಲ್ಗೊಂಡು 8 ಪದಕಗಳನ್ನು ಗಳಿಸುವ ಮೂಲಕ ಸಾಧನೆಗೈದಿದ್ದಾರೆ.

ತಾಲೂಕಿನ ಸಿದ್ದಯ್ಯನಪುರ ಗ್ರಾಮದ ನಿವೖತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಮಾದಯ್ಯ (81) ಹಾಗೂ ತಾಲೂಕಿನ ತೇರಂಬಳ್ಳಿ ಗ್ರಾಮದ ನಿವೖತ್ತ ದೈಹಿಕ ಶಿಕ್ಷಕ ನಟರಾಜಪ್ಪ (71) ಅವರು ಸಾಧನೆಗೈದ ಹಿರಿಯ ಕ್ರೀಡಾಪಟುಗಳು.

ಇವರು ಕೇರಳದ ಕೊಚ್ಚಿಕೋಡುವಿನಲ್ಲಿ ನಡೆದ  ಒಲಂಪಿಯನ್ ರೆಹಮಾನ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾ ಕೂಟ ಜ.10ರಿಂದ 12ರತನಕ ಮೂರು ದಿನಗಳ ಕಾಲ ನಡೆಯಿತು. ಇದರಲ್ಲಿ ಪಾಲ್ಗೊಂಡ  ಕೆ. ಮಾದಯ್ಯ, ಅವರಿಗೆ ಮೂರು ಸಾವಿರ ಮೀಟರ್ ನಡಿಗೆಯಲ್ಲಿ ಚಿನ್ನ, ಸಾವಿರದ ಐನೂರು ಮೀಟರ್ ಓಟದಲ್ಲಿ ಚಿನ್ನ, ಎಂಟುನೂರು ಮೀಟರ್ ಓಟದಲ್ಲಿ ಕಂಚಿನ ಪದಕ, ನಾನೂರು ಮೀಟರ್ ಓಟದಲ್ಲಿ ಕಂಚಿನ ಪದಕ ಹಾಗೂ ನಾನೂರು ಮೀಟರ್ ರೀಲೆ ಓಟದ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಮಾದಯ್ಯ ಅವರು ಮಾಚ್೯ 6.7 ಹಾಗೂ 8 ರಂದು ಥೈಲಾಂಡ್ ನಲ್ಲಿ ನಡೆಯುವ  ಅಂತರ್  ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಅದೇ ರೀತಿಯಲ್ಲಿ ನಟರಾಜಪ್ಪ  ಅವರಿಗೆ ಉದ್ದ ಜಿಗಿತದಲ್ಲಿ ಕಂಚು, ತ್ರಿಬಲ್ ಜಂಪ್ ನಲ್ಲಿ ಕಂಚು, ನಾನೂರು ಮೀಟರ್ ರೀಲೆಯಲ್ಲಿ
ಕಂಚಿನ ಪದಕಗಳಿಸಿದ್ದಾರೆ. ತಾಲೂಕಿಗೆ ಕೀತಿ೯  ತಂದ ಕ್ರೀಡಾಪಟುಗಳನ್ನು ನಾಗರೀಕರ ಸಮಿತಿಯ ನಟರಾಜಮಾಳಿಗೆ ಹಾಗೂ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಗೋವಿಂದ ಅವರು ಅಭಿನಂದಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!