ಪಕ್ಕೆಲುಬು ನಂತರ ಪುಳಿಯೋಗರೆ ಶಿಕ್ಷಕ ಅಮಾನತು

ಹಾಸನ/ಸಕಲೇಶಪುರ ಸುದ್ದಿ

ಜನವರಿ, 17 – ಸಕಲೇಶಪುರ ತಾಲ್ಲೂಕಿನ ಕಬ್ಬಿನದ್ದೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಪ್ರಭಾರಿ ಮುಖ್ಯ ಶಿಕ್ಷಕ ಜೆ.ಎಸ್ ನಿರ್ವಾಣಪ್ಪ ಅವರನ್ನು ಅಮಾನತು ಮಾಡಲಾಗಿದೆ.

ಮೊನ್ನೆಯಷ್ಟೇ ಪಕ್ಕೆಲುಬು ಎಂದು ಉಚ್ಚರಿಸಲು ಬಾರದ ಬಾಲಕನೊಬ್ಬನ ವಿಡಿಯೋ ತೆಗೆದು ಸಾಮಾಜಿಕ‌ ಜಾಲತಾಣದಲ್ಲಿ ಹರಿ ಬಿಟ್ಟ ಶಿಕ್ಷಕ ಕರ್ತವ್ಯದಿಂದ ಅಮಾನತ್ತಾಗಿದ್ದು ಇದೀಗ ಅಂತಹದೇ ಮತ್ತೊಂದು ಪ್ರಕರಣದಲ್ಲಿ ಮತ್ತೋರ್ವ ಶಿಕ್ಷಕ ಅಮಾನತ್ತಾಗಿದ್ದಾರೆ.

ಶಾಲಾ ಬಾಲಕಿಯಿಂದ ಪುಳಿಯೊಗರೆ ಎಂಬ ಪದವನ್ನು ಉಚ್ಚರಿಸುವಂತೆ, ಪದೇ ಪದೆ ಕೇಳಿ ಆಕೆಗೆ ಆ ಪದವನ್ನು ಉಚ್ಚರಿಸಲು ಆಗದಿದ್ದನ್ನು ತಮಾಷೆ ಮಾಡಿ, ಅಪಹಾಸ್ಯ ಮಾಡುತ್ತಾ ಎಲ್ಲಾ ಮಕ್ಕಳು ನಗುತ್ತಿರುವ ವೀಡಿಯೋವನ್ನು ವಾಟ್ಸ್ ಆಪ್ ಗ್ರೂಪ್ ನಲ್ಲಿ ಅಪ್‍ಲೋಡ್ ಮಾಡಿದ್ದರು.

ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಈ ಕೃತ್ಯ ಮಕ್ಕಳ ಆತ್ಮ ವಿಶ್ವಾಸಕ್ಕೆ ಧಕ್ಕೆಯಾಗಿ ಕಲಿಕೆಯಲ್ಲಿ ಹಿಂದುಳಿಯುತ್ತಾರೆ ಎಂಬ ಕಾರಣದಿಂದ ಕೃತ್ಯವನ್ನು ಅಪರಾಧವೆಂದು ಪರಿಗಣಿಸಲಾಗಿದೆ.

ಅಲ್ಲದೇ ಶಾಲೆಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ಭೇಟಿ ನೀಡಿ ನಡೆಸಿದ ಸ್ಥಳ ಪರಿಶೀಲನಾ ವರದಿಯ ಪ್ರಕಾರ ಶಿಕ್ಷಕರು ಆ ದಿನ ಹಾಜರಾತಿ ವಹಿಯಲ್ಲಿ ಸಾಂದರ್ಭಿಕ ರಜೆ ಎಂದು ನಮೂದಿಸಿರುತ್ತಾರೆ. ಆದರೆ ನಿಯಮಾನುಸಾರ ಎಸ್.ಡಿ.ಎಂ.ಸಿ ಅಧ್ಯಕ್ಷರಿಂದ ಅನುಮೋದನೆ ಪಡೆದಿರುವುದಿಲ್ಲ ಹಾಗೂ ಇಲಾಖಾ ಗಮನಕ್ಕೂ ತಂದಿರದ ಕಾರಣ ನಿರ್ವಾಣಪ್ಪ ಅವರನ್ನು ಅಮಾನತು ಮಾಡಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!