ದೇಶದ ಸ್ವಾತಂತ್ರ್ಯದಲ್ಲಿ ಬಿಜೆಪಿ ಆರ್.ಎಸ್.ಎಸ್ ಕೊಡುಗೆ ಇಲ್ಲ : ಎಚ್‌ಡಿ‌ಕೆ

ಬೆಂಗಳೂರು

ಜನವರಿ, 17 – ದೇಶಕ್ಕೆ‌ ಸ್ವಾತಂತ್ರ್ಯ ತರಲು ಬಿಜೆಪಿಯವರ ಕೊಡುಗೆ ಇಲ್ಲ. ಅದರಲ್ಲೂ ಆರ್ ಎಸ್ ಎಸ್ ಕೊಡುಗೆಯಂತೂ ಇಲ್ಲವೇ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾವರ್ಕರ್ ಮತ್ತು ಗೊಳ್ವಾಂಕರ್ ಅವರಿಗೆ ಭಾರತ ರತ್ನ ನೀಡಿದ್ದಾರೆ. ಸುಮ್ಮನೆ ನಾಥೂರಾಮ್ ಗೊಡ್ಸೆಗೂ ಭಾರತ ರತ್ನ ಕೊಡಿ ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು.

ಸ್ವಾತಂತ್ರ್ಯ ಸಮಯದಲ್ಲಿ ನಾವೆಲ್ಲ‌ ಹುಟ್ಟಿರಲಿಲ್ಲ. ಬಿಜೆಪಿ ನಮ್ಮ ದೇಶವನ್ನ ಸ್ವಾತಂತ್ರ್ಯ ಪೂರ್ವಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬಿಜೆಪಿ ದೇಶದಲ್ಲಿ ಸಾಕಷ್ಟು ತಪ್ಪು ನಿರ್ಧಾರಗಳನ್ನು ಕೈಗೊಂಡಿದೆ ಎಂದರು.

ಮಂಗಳೂರು ಘಟನೆ ಸಂಬಂಧ ವಿಡಿಯೋ ಬಿಡುಗಡೆ ಮಾಡಿದ್ದೇನೆ. ಸದನದಲ್ಲಿ ನಾನು ಈ ಬಗ್ಗೆ ಹೋರಾಟ ಮಾಡುತ್ತೇನೆ. ಮಂಗಳೂರು ಗಲಭೆ ಹಿನ್ನಲೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇಲ್ಲವಾದರೆ ಸದನ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಂವಿಧಾನವನ್ನು ತಿರುಚುವ ಕೆಲಸ ಬಿಜೆಪಿ ಮಾಡುತ್ತಿದೆ. ಎನ್‌ಪಿ‌ಆರ್ ಮತ್ತು ಎನ್‌ಆರ್‌ಸಿ ಗೆ ಒಂದೊಂದಕ್ಕೂ ಲಿಂಕ್ ಇದೆ. ಇದು ಜಾರಿಗೆ ಬಂದ್ರೆ 7.5 ಕೋಟಿ ಜನರಿಗೆ ಅನ್ಯಾಯ ಆಗುತ್ತೆ. ಈ 7.5 ಕೋಟಿ ಜನ ಕೋರ್ಟ್ ಗೆ ಹೋದ್ರೆ ಪ್ರಕರಣ ಮುಗಿಯೋದು ಯಾವಾಗ ಎಂದು ಪ್ರಶ್ನಿಸಿದರು.

ಅಮಿತ್ ಷಾ ನಾಳೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಸಿಎಎ ಬಗ್ಗೆ ಜಾಗೃತಿ ಮೂಡಿಸಲು ಬರ್ತಿದ್ದಾರೆ. ಜಾಗೃತಿ ಕೆಲಸ ಆಮೇಲೆ ಮಾಡಿ. ಅಮಿತ್ ಷಾ ಮೊದಲು ನೆರೆ ಪರಿಹಾರ ಕೊಡಲಿ. ಕೃಷ್ಣ ಮೇಲ್ದಂಡೆ ಯೋಜನೆಗ ಹಣ ಕೊಡಲಿ. ಅಲ್ಲದೇ ರಾಜ್ಯದ ನೀರಾವರಿ ಸಮಸ್ಯೆಗಳನ್ನು ಪರಿಹಾರದ ಹಿನ್ನಲೆ ರಾಜ್ಯಕ್ಕೆ ‌ಕೊಡಬೇಕಾದ ಅನುದಾನ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು‌.

ಎಸ್ ಡಿ‌‌ ಪಿ ಐ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿ ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಲಿ. ಆದರೆ ಅದೇ ನೆಪದಲ್ಲಿ‌ ಒಂದು ಸಮುದಾಯದ ಬಗ್ಗೆ ದೂರುವುದು ಬೇಡ. ಕಿಡಿಗೇಡಿಗಳ ಕೃತ್ಯಕ್ಕೆ ಧರ್ಮದ ಹೆಸರು ಬೇಡ. ಅದ್ಯಾರೋ ಸೂಲಿಬೆಲೆ, ಇನ್ನೊಬ್ಬ ಎಂ.ಪಿ ಇವರ ಕೊಡುಗೆ ಏನಿದೆ‌ ಬೆಂಗಳೂರಿಗೆ ಎಂದು ಪ್ರಶ್ನೆ ಮಾಡಿದರು.

ತೇಜಸ್ವಿ ಸೂರ್ಯನಿಗೆ ಅದ್ಯಾವುದೋ ಕಾರಣಕ್ಕೆ ಓಟು ಹಾಕಿದ್ದಾರೆ. ಅವರಿಬ್ಬರು ಮಹಾನ್ ದೇಶಭಕ್ತರೇನಲ್ಲ. ದೇಶಕ್ಕೆ ಹೋರಾಡಿದ ಯುಗ ಪುರುಷರು ಅಲ್ಲ. ಅವರನ್ನು ಹುತಾತ್ಮರನ್ನಾಗಿ ಮಾಡಲು ಹೋಗುತ್ತಾರೆ. ತಪ್ಪು ಮಾಡಿದ್ದರೆ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.

Share Post

Leave a Reply

Your email address will not be published. Required fields are marked *

error: Content is protected !!