ಬೆಳೆ ನಾಟಿ ಹಾಗೂ ಗೊಬ್ಬರ ಸಿಂಪಡಿಸುವ ವಿನೂತನ ಯಂತ್ರ

ವಿಜಯಪುರ/ಚಡಚಣ ಸುದ್ದಿ

ಜ.15 – ವಿವಿಧ ಬೆಳೆಗಳನ್ನು ನಾಟಿ ಮಾಡುವುದಲ್ಲದೇ ಅದರ ಜೊತೆಗೆ ಗೊಬ್ಬರ ಸಿಂಪಡಿಸುವ ವಿನೂತನ ಯಂತ್ರ ಇದೀಗ ಜಮೀನುಗಳಲ್ಲಿ ಕಾರ್ಯಾರಂಭ ಮಾಡಿದ್ದು ಇದು ಒಂದು ದಿನದಲ್ಲಿ 5 ರಿಂದ 6 ಎಕರೆ ಕಬ್ಬು ನಾಟಿ ಮಾಡುವ ಸಾಮರ್ಥ್ಯ ಹೊಂದಿದೆ.

https://youtu.be/keDnYwXXeYs

ತಾಲ್ಲೂಕಿನ ಕೇರೂರ ಉಮರಾಣಿ ಗ್ರಾಮದ ಭೈರವನಾಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಪ್ರಗತಿಪರ ರೈತ ಮಹಾದೇವ ಸಾಹುಕಾರ ಭೈರಗೊಂಡ ಅವರು ತಮಗೂ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ರೈತರಿಗೆ ಕಬ್ಬು ನಾಟಿ ಮಾಡಲು ಅನುಕೂಲವಾಗಲೆಂದು ಹೊಸ ತಂತ್ರಜ್ಞಾನದ ಯಂತ್ರವನ್ನು ತಂದಿದ್ದಾರೆ.

ಈ ಹೊಸ ತಂತ್ರಜ್ಞಾನದ ಯಂತ್ರ ಕಬ್ಬಿನ ಬೆಳೆಯಷ್ಟೇ ನಾಟಿ ಮಾಡುವುದಲ್ಲದೇ, ಕಡಲೆ, ಮೆಕ್ಕೆ ಜೋಳ, ತೊಗರಿ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಜೊತೆಗೆ ಗೊಬ್ಬರ ಸಿಂಪಡನೆ ಮಾಡುವ ವಿನೂತನ ಕೆಲಸ ಮಾಡುತ್ತಿದೆ.

ಬಡ ರೈತಾಪಿ ಜನರಿಗೆ ಕಡಿಮೆ ಖರ್ಚಿನಲ್ಲಿ ವಿವಿಧ ಬೆಳೆ ನಾಟಿ ಮಾಡಲು ಮತ್ತು ಕಸ ತೆಗೆಯುವ ಯಂತ್ರವನ್ನೂ ಸಹ ರೈತರಿಗೆ ನೆರವಾಗಲೆಂದು ಅವರು ಖರೀದಿಸಿ ತಂದಿದ್ದಾರೆ‌.

ಕೇರೂರ ಗ್ರಾಮದ ಸುತ್ತ-ಮುತ್ತಲಿನ ಗ್ರಾಮದ ರೈತರು ಕೇವಲ ಯಂತ್ರಕ್ಕೆ ತಗಲುವ ಡಿಸೇಲ್ ಮಾತ್ರ ಹಾಕಿಸಿಕೊಂಡು ಯಂತ್ರ ಬಳಸಿಕೊಳ್ಳವ ಅವಕಾಶ ಮಹಾದೇವರವರು ಮಾಡಿ ಕೊಟ್ಟಿದ್ದಾರೆ.

ಕೂಲಿ ಕಾರ್ಮಿಗಳಿಂದ ಹತ್ತಾರು ದಿನ ಆಗುವ ಬಿತ್ತನೆ ಕಾರ್ಯ ಈಗ ಸಲೀಸಾಗಿ ಈ ಯಂತ್ರ ಒಂದೆರಡು ದಿನಗಳಲ್ಲಿ ಒಂದಿಬ್ಬರು ಕಾರ್ಮಿಕರಿಂದ ಮುಗಿಸುವುದರ ಜೊತೆಗೆ ಖರ್ಚು ಸಹ ಕಡಿಮೆ ಮಾಡುವ ಯಂತ್ರ ಇದಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!