ಸಾಲದ ಹೊರೆಗೆ ಬೇಸತ್ತು ರೈತ ಮಹಿಳೆ ಆತಹತ್ಯೆ

ಮಂಡ್ಯ/ಕೆ.ಆರ್.ಪೇಟೆ ವರದಿ

ಜ.14 – ತಾಲ್ಲೂಕಿನ ಗೋವಿಂದೇಗೌಡನಕೊಪ್ಪಲು ಗ್ರಾಮದ ಕೃಷಿ ಕಾರ್ಮಿಕ ರೈತ ಮಹಿಳೆ ಸಾಲದ ಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಗೋವಿಂದೇಗೌಡನಕೊಪ್ಪಲು ಗ್ರಾಮದ ನಾರಾಯಣಗೌಡರ ಪತ್ನಿ ರತ್ನಮ್ಮ(45)
ಆತ್ಮಹತ್ಯೆ ಶರಣಾದ ರೈತ ಮಹಿಳೆ ಎಂದು ಗುರುತಿಸಲಾಗಿದೆ.

ಮೃತ ಮಹಿಳೆಯ ಕುಟುಂಬಕ್ಕೆ ಹೊಸಹೊಳಲು ಗ್ರಾಮ ಎಲ್ಲೆಗೆ ಸೇರಿದ ಸರ್ವೆ ನಂ 109 ರಲ್ಲಿ ಎರಡು ಎಕರೆ ಭೂಮಿ ಇದ್ದು ಅದು ಪಾಳು ಬಿದ್ದಿತ್ತು. ಈ ಹಿನ್ನಲೆಯಲ್ಲಿ ರೈತ ಮಹಿಳೆ ತನ್ನ ಭೂಮಿಯನ್ನು ರಿಸ್ಟೋರ್ ಮಾಡಿಸಿಕೊಳ್ಳಲು ಹಲವು ಸ್ವಸಹಾಯ ಸಂಘಗಳಲ್ಲಿ ಹಾಗೂ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌‌ಗಳಲ್ಲಿ ಸಾಲ ಮಾಡಿಕೊಂಡಿದ್ದರು.

ಸುಮಾರು ಐದರಿಂದ ಆರು ಲಕ್ಷ ರೂಗಳ ಸಾಲವನ್ನು ಪಡೆದುಕೊಂಡಿದ್ದರು ಎನ್ನಲಾಗಿದ್ದು ಎಷ್ಟೇ ಅಲೆದರೂ ಭೂಮಿ ರಿಸ್ಟೋರ್ ಪ್ರಕ್ರಿಯೆ ಆಗಿರಲಿಲ್ಲ. ಭೂಮಿಯ ದಾಖಲೆಗಳು ಅವರ ಕುಟುಂಬದ ಹೆಸರಿಗೆ ಆಗಿರಲಿಲ್ಲ.

ಈ ನಡುವೆ ಸಾಲ ನೀಡಿದ ವಿವಿಧ ಸಂಘಗಳ ಕಂತಿನ ಹಣವನ್ನು ಪಾವತಿಸಲು ಕಷ್ಟ ಸಾಧ್ಯವಾಗಿತ್ತು. ಇವೆರಡೂ ಕಾರಣಗಳಿಂದ ಮನನೊಂದ ಮಹಿಳೆ ಇಂದು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು‌. ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!