ಸಂಪುಟ ವಿಸ್ತರಣೆಗೆ ಟ್ರಬಲ್, ಹೈಕಮಾಂಡ್ ಭೇಟಿಗೆ ಅವಕಾಶವಿಲ್ಲ : ಸಿಎಂ ದೆಹಲಿ ಪ್ರವಾಸ ರದ್ದು

ಬೆಂಗಳೂರು ರಾಜಕೀಯ

ಜ.14 – ಒಂದು ತಿಂಗಳು ಧನುರ್ಮಾಸ ಇದ್ದ ಕಾರಣ ಈ ಅವಧಿಯಲ್ಲಿ ಸಂಪುಟ ವಿಸ್ತರಣೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಇದೀಗ ನಾಳೆಗೆ ಧನುರ್ಮಾಸ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗಿದ್ದರು. ಆದರೆ, ಹೈಕಮಾಂಡ್ ಅವರ ಭೇಟಿಗೆ ಅವಕಾಶ ನೀಡದಿರುವುದಿರಿಂದ ದೆಹಲಿಗೆ ತೆರಳುತ್ತಿಲ್ಲ.

ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡು ತಿಂಗಳು ಕಳೆದರು ಸಂಪುಟ ವಿಸ್ತರಣೆ ಇನ್ನು ಸಾಧ್ಯವಾಗಿಲ್ಲ. ಅತ್ತ ಚುನಾವಣೆಯಲ್ಲಿ ಗೆದ್ದು ಅರ್ಹರಾಗಿರುವ ಶಾಸಕರು ಸಚಿವರಾಗಲು ತುದಿಗಾಲಲ್ಲಿ ನಿಂತಿದ್ದರೆ, ಇತ್ತ ತಮಗೂ ಸಚಿವ ಸ್ಥಾನ ಬೇಕು ಎಂದು ಪಕ್ಷದ ಹಿರಿಯ ಶಾಸಕರು ಹಠ ಹಿಡಿದಿದ್ದಾರೆ. ಆದರೆ, ಇವರಿಬ್ಬರ ಒತ್ತಡದ ನಡುವೆ ಸಂಪುಟ ವಿಸ್ತರಣೆ ಮಾಡಲು ಸಿಎಂ ಬಿ.ಎಸ್.ಯಡಿಯೂರಪ್ಪ ಸಿದ್ಧರಾಗಿದ್ದರೂ, ಹೈಕಮಾಂಡ್ ಮಾತ್ರ ಗ್ರೀನ್ ಸಿಗ್ನಲ್ ನೀಡಲು ತಡ ಮಾಡುತ್ತಿದೆ.

ಸಂಪುಟ ವಿಸ್ತರಣೆಗಾಗಿ ಇಂದು ಮತ್ತು ನಾಳೆ ಸಿಎಂ ಬಿಎಸ್​ವೈ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಹೈಕಮಾಂಡ್ ಭೇಟಿಗೆ ಅವಕಾಶ ಸಿಗದ ಕಾರಣ ದೆಹಲಿ ಪ್ರವಾಸವನ್ನು ರದ್ದುಗೊಳಿಸಿ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಈಗಾಗಲೇ ಹಲವು ಬಾರಿ ದೆಹಲಿಗೆ ತೆರಳಲು ಸಿಎಂ ಬಿಎಸ್​ವೈ ಸಿದ್ಧತೆ ಮಾಡಿಕೊಂಡಿದ್ದರೂ ಹೈಕಮಾಂಡ್ ಸಮಯದ ಅಭಾವದಿಂದ ಭೇಟಿಗೆ ಅವಕಾಶ ನೀಡಿಲ್ಲ. ಅಲ್ಲದೇ, ಒಂದು ತಿಂಗಳು ಧನುರ್ಮಾಸ ಇದ್ದ ಕಾರಣ ಈ ಅವಧಿಯಲ್ಲಿ ಸಂಪುಟ ವಿಸ್ತರಣೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಇದೀಗ ನಾಳೆಗೆ ಧನುರ್ಮಾಸ ಮುಕ್ತಾಯವಾಗುವ ಹಿನ್ನಲೆಯಲ್ಲಿ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗಿದ್ದರು. ಆದರೆ, ಹೈಕಮಾಂಡ್ ಅವರ ಭೇಟಿಗೆ ಅವಕಾಶ ನೀಡದಿರುವುದಿರಿಂದ ದೆಹಲಿಗೆ ತೆರಳುತ್ತಿಲ್ಲ

Share Post

Leave a Reply

Your email address will not be published. Required fields are marked *

error: Content is protected !!