ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿಗೆಲ್ಲ ಅರ್ಥವಿದೆಯಾ? ;ಸಿಎಂ ಯಡಿಯೂರಪ್ಪ

ಬೆಂಗಳೂರು : ಮಂಗಳೂರು ಗಲಭೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿ ನಕಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿಗೆಲ್ಲ ಅರ್ಥವಿದೆಯಾ? ಕಟ್ ಅಂಡ್ ಪೇಸ್ಟ್ ಸಿಡಿ ಎಂದು ಅವರು ಕುಹುಕವಾಡಿದರು.

ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಲಾಲ್ಬಹುದ್ದೂರ್ ಶಾಸ್ತ್ರಿಯವರ 54ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು ಮಾತನಾಡಿದರು. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಸಿ ಸಾಚತನದಿಂದ ಕೂಡಿಲ್ಲ. ತಂತ್ರಜ್ಞಾನವನ್ನು ಬಳಸಿಕೊಂಡು ಯಾರು ಹೇಗೆ ಬೇಕಾದರೂ ಸೃಷ್ಟಿಸಬಹುದು.

ಮಾಜಿ ಪ್ರಧಾನಿ ಲಾಲ್ಬಹುದ್ದೂರ್ ಶಾಸ್ತ್ರಿ ಅವರು ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರು, ಸರಳವಾಗಿ ಜೀವಿಸಿ ಧೀಮಂತ ರಾಜಕಾರಣಿಯಾಗಿ ಎಲ್ಲರಿಗೂ ಆದರ್ಶವಾಗಿದ್ದಾರೆಇಂದಿನ ಯುವಜನತೆಗೆ ಅವರ ಚಿಂತನೆಗಳು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಇನ್ನು ಮುಂಜಾನೆ ನಿಧನರಾದ ಸಾಹಿತಿ ಚಿದಾನಂತಮೂರ್ತಿ ಅವರ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದ ಅವರು, ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರನ್ನು ವಿಧಾನಪರಿಷತ್ಗೆ ನಾಮಕರಣ ಮಾಡಲು ಕೇಳಿಕೊಂಡಿದ್ದೆ. ಆದರೆ ಪ್ರಸ್ತಾವನೆಯನ್ನು ಒಪ್ಪದ ಅವರು ನನಗೆ ವಯಸ್ಸಾಗಿದೆ. ವಿಧಾನಪರಿಷತ್ ಸದಸ್ಯ ಸ್ಥಾನವನ್ನು ನಿಭಾಯಿಸುವಷ್ಟು ಶಕ್ತಿ ನನಗಿಲ್ಲ. ಬೇರೆ ಯಾರಿಗಾದರೂ ಕೊಡಿ ಎಂದು ಹೇಳಿದ್ದರು.

Share Post

Leave a Reply

Your email address will not be published. Required fields are marked *

error: Content is protected !!