ಪೌರತ್ವ ಕಾಯ್ದೆ ಬೆಂಬಲಿಸಿ ಬಿಜೆಪಿ ಕಾರ್ಯಕರ್ತರಿಂದ ರ್ಯಾಲಿ : ಪೊಲೀಸರಿಂದ ಲಾಠಿ ಚಾರ್ಜ್

ಕೋಲಾರ ಜಿಲ್ಲಾ ಸುದ್ದಿ

ಜ.04 – ಕೋಲಾರದಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ನಡೆದ ರ್‍ಯಾಲಿಯಲ್ಲಿ ಪೊಲೀಸ್ ಲಾಠಿ ಪ್ರಹಾರ ನಡೆಸಿದ್ದಾರೆ. ಲಾಠಿ ಪ್ರಹಾರಕ್ಕೆ ಸಂಸದ ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತರ ಪ್ರದೇಶಗಳಿಗೆ ತೆರಳಲು ಅನುಮತಿ ನಿರಾಕರಿಸಿದ ಪೊಲೀಸರ ಸಿಟ್ಟನ್ನು ಕಾರ್ಯಕರ್ತರು ಬಿಜೆಪಿ ಮುಖಂಡರ ಮೇಲೆ ತೋರಿಸಿದ್ದು ಕೇಂದ್ರ ಸರ್ಕಾರದ ಪೌರತ್ವ ಕಾಯಿದೆ ಬೆಂಬಲಿಸಿ ಕೋಲಾರದಲ್ಲಿ ಬಿಜೆಪಿ ಹಮ್ಮಿಕೊಂಡ ಜನಜಾಗೃತಿ ಸಭೆ ವಿವಾದದ ಕೇಂದ್ರ ಬಿಂದುವಾಯಿತು.

ಹೌದು,, ಜಾಥಾಗೆ ಹಠಕ್ಕೆ ಮಣಿಯದೆ ಲಾಠಿ ಝಳಪಿಸಿದ ಪೊಲೀಸರು. ಮತ್ತೊಂದೆಡೆ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಹೈರಾಣ ಅದ ಸಂಸದರು ವೇದಿಕೆಯಲ್ಲಿ ಹಾಜರಿದ್ದ ಬಿಜೆಪಿ ನಾಯಕರು ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದ ಕೋಲಾರ ನಗರದ ಎಸ್ಎನ್ಆರ್ ವೃತ್ತದಲ್ಲಿ ಹಾಗೂ ಎಂಜಿ ರಸ್ತೆ ವೃತ್ತದಲ್ಲಿ.

ಕೋಲಾರದಲ್ಲಿ ಪೌರತ್ವ ಕಾಯ್ದೆ ಜಾರಿಯನ್ನು ಬೆಂಬಲಿಸಿ ಬಿಜೆಪಿ ನೇತೃತ್ವದಲ್ಲಿ ಕರೆ ಕೊಟ್ಟಿದ್ದ ಇಂದಿನ ಶಾಂತಿಯುತ ರ್‍ಯಾಲಿ ಹಿಂಸೆ ರೂಪ ಪಡೆದುಕೊಂಡಿತು. ಮುಸ್ಲಿಂ ಸಮುದಾಯದವರ ವಸತಿ ಪ್ರದೇಶವನ್ನು ಹಾದು ಹೋಗಬೇಕು ಅಂತ ಪಟ್ಟು ಹಿಡಿದ ಕಾರ್ಯಕರ್ತರ ಮನವೊಲಿಸಲು ಯತ್ನಿಸಿ ವಿಫಲರಾದ ಪೊಲೀಸರು ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ.

ಕೋಲಾರದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಬೆಂಬಲಿಸಿ ಇಂದು ಬಿಜೆಪಿ ನೇತೃತ್ವದಲ್ಲಿ ಹಲವು ಸಂಘಟನೆಗಳು ಜಾಥಾವನ್ನು ಆಯೋಜಿಸಿದ್ದವು. ಜಾಥಾ ಹೊರಡುವುದಕ್ಕೂ ಮುನ್ನ ಇಲ್ಲಿನ ಎಸ್‌ಎನ್‌ಆರ್ ಆಸ್ಪತ್ರೆಯ ಸರ್ಕಲ್‌ನಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕುವುದಕ್ಕೆ ನೂರಾರು ಮಂದಿ ಕಾರ್ಯಕರ್ತರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲವರು ಕ್ಲಾಕ್ ಟವರ್ ಪ್ರದೇಶಕ್ಕೆ ಹೋಗುವುದಕ್ಕೆ ಪಟ್ಟು ಹಿಡಿದ್ರು. ಅಲ್ಪಸಂಖ್ಯಾತ ಸಮುದಾಯದವ್ರೇ ಹೆಚ್ಚಿರುವ ಆ ಏರಿಯಾಗೆ ಹೋಗಲು ಪೊಲೀಸರು ನಿರಾಕರಿಸಿದ್ದೇ ಲಾಠಿ ಚಾರ್ಜ್ ನಡೆಯಲು ಮೂಲವಾಯ್ತು.

ಎಸ್ಪಿ ಕಾರ್ತಿಕ್ ರೆಡ್ಡಿ ಅವರ ಸೂಚನೆಯಂತೆ ನಡೆದ ಪೊಲೀಸರ ಲಾಠಿ ಪ್ರಹಾರದಲ್ಲಿ ಅಲ್ಲಿದ್ದ ನೂರಾರು ಮಂದಿ ಕಾರ್ಯಕರ್ತರು ದಿಕ್ಕಾಪಾಲಾದ್ರು. ಲಾಠಿ ಪ್ರಹಾರ ಒಂದು ಕಡೆ ನಡೀತಿದ್ರೂ ಒಂದಷ್ಟು ಮಂದಿ ಕಾರ್ಯಕರ್ತರು ಎಸ್ಪಿ ಕಾರ್ತೀಕ ರೆಡ್ಡಿ ಹಾಗೂ ಇನ್ನಿತರೆ ಪೊಲೀಸ್ ಅಧಿಕಾರಿಗಳ ಜೊತೆಗೆ ಜಗಳಕ್ಕಿಳಿದಿದ್ರು. ಈ ಸಂದರ್ಭದಲ್ಲಿ ಪೊಲೀಸರ ವರ್ತನೆಯನ್ನು ಖಂಡಿಸಿ ಒಂದಷ್ಟು ಮಂದಿ ಅದೇ ಸರ್ಕಲ್‌ನಲ್ಲಿ ಧರಣಿ ಕುಳಿತರು.

ಶಾಂತಿಯುತವಾಗಿ ಪ್ರತಿಭಟನೆ ನಡೆಸ್ತಿದ್ದ ನಮ್ ಮೇಲೆ ಪೊಲೀಸ್ರು ಲಾಠಿ ಚಾರ್ಜ್ ಮಾಡಿದ್ದಾರೆ ಅಂತ ಆರೋಪಿಸಿದ್ರು. ಕ್ಲಾಕ್ ಟವರ್ ಕಡೆಗೆ ರ್‍ಯಾಲಿ ತೆರಳಲು ಅನುಮತಿ ಸಿಕ್ಕಿದೆ ಅಂತ ಹೇಳಿದ್ದ ಮುಖಂಡರು ಇದೀಗ ನಾಪತ್ತೆಯಾಗಿದ್ದಾರೆ. ಪೊಲೀಸ್ರತ್ರ ನಾವು ಏಟು ತಿನ್ನುವಂತಾಗಿದೆ ಅಂತ ಸ್ಥಳದಲ್ಲಿದ್ದವ್ರು ವೇದಿಕೆ ಸಭೆ ನಡೆಯತ್ತಿದ್ದ ಕಾರ್ಯಕ್ರಮದ ಬಳಿ ತೆರಳಿ ಬಿಜೆಪಿ ನಾಯಕರ ವಿರುದ್ಧ ವ್ಯಕ್ತಪಡಿಸಿದ್ರು.

ಲಾಠಿ ಪ್ರಹಾರಕ್ಕೆ ಕಾರಣರಾದ ಪೋಲಿಸ್ ಆಧಿಕಾರಿಗಳ ವಿರುದ್ಧ ಈಗಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಂಸದ ಎಸ್.ಮುನಿಸ್ವಾಮಿ ಆಕ್ರೋಶ ಭರಿತ ಜನರನ್ನು ಸಮಾಧಾನ ಪಡಿಸುವಲ್ಲಿ ಹೈರಣಾದರು.

ಸಭೆ ನಂತ್ರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ ಆಧಿಕಾರಿಗಳ ವಿರುದ್ಧ ಹರಿಹಾಯ್ದರು. ಮಂಗಳೂರು ರೀತಿಯಲ್ಲಿ ಕೆಲವರು ಕಳೆದ ರಾತ್ರಿ ರೈಲ್ವೆ ನಿಲ್ದಾಣ ಸಮೀಪ ಕಲ್ಲುಗಳನ್ನು ಶೇಖರಣೆ ಮಾಡಿದರು.

ಪೌರತ್ವ ತಿದ್ದುಪಡಿ ಬೆಂಬಲಿಸಿ ಜನಜಾಗೃತಿ ಸಭೆಯನ್ನು ಕೆಡಿಸಲು ಕೆಲವು ಕಿಡಿಗೇಡಿಗಳು ಸಂಚು ರೂಪಿಸಿದ್ದರು. ಆದರೂ ಶಾಂತ ರೀತಿಯಲ್ಲಿ ಜನಜಾಗೃತಿ ಸಭೆ ನಡೆದಿದೆ. ನಮ್ಮ ಸಭೆಗೆ ಅಡ್ಡಗಾಲು ಹಾಕಲು ಕೆಲವು ಕಿಡಿಗೇಡಿಗಳು ಪಿತೂರಿ ಮಾಡಿದ್ದರು. ಜಲ್ಲಿ ಕಲ್ಲುಗಳನ್ನು ಚೀಲದಲ್ಲಿ ತುಂಬಿಸುತ್ತಿರುವ ಪೋಟೋಗಳು ಕೂಡ ನಮಗೆ ಲಭ್ಯವಾಗಿದೆ. ಪೋಲಿಸರಿಗೂ ಗೊತ್ತಿದ್ರು ಯಾವುದೇ ಕ್ರಮಕೈಗೊಂಡಿಲ್ಲ ಎಂದರು.

ನಗರದ ಸೂಕ್ಷ್ಮ ಪ್ರದೇಶ ಕ್ಲಾಕ್ ಟವರ್ ನಲ್ಲಿ ರ್ಯಾಲಿಗೆ ಅವಕಾಶ ನೀಡದ ಹಿನ್ನೆಲೆ ಕೆಲವು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ನಿಜ, ಆದರೆ ಪೋಲಿಸರು ಶಾಂತ ರೀತಿಯಲ್ಲಿ ವರ್ತಿಸಬೇಕಾಗಿತ್ತು. ಕ್ಲಾಕ್ ಟವರ್ ಪ್ರದೇಶ ಏನೂ ಪಾಕಿಸ್ತಾನದಲ್ಲಿ ಇಲ್ಲ. ಭಾರತದಲ್ಲಿ ಇದೆ. ನಮ್ಮ ಜಾಗಕ್ಕೆ ನಾವು ಹೋಗಕ್ಕೆ ಬೇರೆ ಯಾರ ಅನುಮತಿಯೂ ಬೇಕಾಗಿಲ್ಲ. ಅಧಿಕಾರಿಗಳಿಗೆ ಯಾರು ಮಾಹಿತಿ ಕೊಟ್ರೊ ಗೊತ್ತಿಲ್ಲ, ಇನ್ಮುಂದೆ ಕೋಲಾರದಲ್ಲಿ ಇವಕ್ಕೆಲ್ಲ ಅವಕಾಶಗಳಿಲ್ಲ ಎಂದರು.

ಒಟ್ನಲ್ಲಿ, ಬಿಜೆಪಿ ನೇತೃತ್ವದಲ್ಲಿ ಕೋಲಾರದಲ್ಲಿ ನಡೆದ ಭಾರತೀಯ ನಾಗರಿಕ ರಕ್ಷಣಾ ವೇದಿಕೆಯ ಕಾರ್ಯಕ್ರಮದಲ್ಲಿ ನಡೆದ ಅಹಿತಕರ ಘಟನೆಯು ಸದ್ಯಕ್ಕೆ ತಿಳಿಯಾದಂತೆ ಕಂಡು ಬಂದರೂ, ಬೂದಿ ಮುಚ್ಚಿದ ಕೆಂಡದಂತಿದೆ. ಪ್ರಸ್ತುತ ಕೋಲಾರದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

  • ಸಾಯಿನಾಥ್ ದರ್ಗಾ ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!