Sunday, August 9, 2020
Home ಜಿಲ್ಲೆ ತುಮಕೂರು ತುಮಕೂರಿನಲ್ಲಿ ನಡೆಯುವ ರೈತರ ಸಮಾವೇಶಕ್ಕೆ ಪ್ರಧಾನಿ ಮೋದಿ ಆಗಮನ

LATEST TRENDING

ಕೊರೊನಾ ಸೋಂಕಿಗೊಳಗಾಗಿರುವ ಸಿಎಂ ಬಿಎಸ್ ಯಡಿಯೂರಪ್ಪ...

ಕೋವಿಡ್-19 ಸೋಂಕಿಗೆ ತುತ್ತಾಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ಮಾಹಿತಿ ನೀಡಿದೆ.ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಯಡಿಯೂರಪ್ಪ ಅವರ ಆರೋಗ್ಯದ ಬಗ್ಗೆ...

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಲಾಯಂ ಸಿಂಗ್‌ ಆರೋಗ್ಯದಲ್ಲಿ...

 ಲಕ್ನೋ: ಅನಾರೋಗ್ಯದ ಹಿನ್ನೆಲೆಯಲ್ಲಿ ಲಕ್ನೋದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ (80) ಆರೋಗ್ಯ ಸ್ಥಿರವಾಗಿದೆ. ಮೂತ್ರಕೋಶ ಸಮಸ್ಯೆ ಕಾಣಿಸಿಕೊಂಡ...

ಹಾವೇರಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ...

ಹಾವೇರಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ವ್ಯಾಪಕ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆ ಹಾಗೂ ಬೆಳೆಹಾನಿ ಪ್ರಾಥಮಿಕ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆ ಹಾನಿಗೆ...

ರಾಜ್ಯದಲ್ಲಿ ಪ್ರವಾಹ; ಸೋಮವಾರ ನರೇಂದ್ರ ಮೋದಿ ಸಭೆ

5 ರಾಜ್ಯಗಳ ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಭೆ ನಡೆಸಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಗಳಿಗೂ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಆಗಸ್ಟ್ 10ರಂದು...

ಕೃಷಿ ವಲಯದ ಅಭಿವೃದ್ಧಿಗೆ ರೂ. 1 ಲಕ್ಷ...

 ನವದೆಹಲಿ : ಕೃಷಿ ವಲಯದ ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಡಿ ರೂ. 1 ಲಕ್ಷ ಕೋಟಿ...

ತುಮಕೂರಿನಲ್ಲಿ ನಡೆಯುವ ರೈತರ ಸಮಾವೇಶಕ್ಕೆ ಪ್ರಧಾನಿ ಮೋದಿ ಆಗಮನ

ಬೆಂಗಳೂರು/ತುಮಕೂರು

ಜ.01 – ಪ್ರಧಾನಿ ನರೇಂದ್ರ ಮೋದಿ ನಾಳೆ [ಗುರುವಾರ] ತುಮಕೂರಿಗೆ ಆಗಮಿಸಲಿದ್ದು, ರೈತರ ಸಮಾವೇಶದಲ್ಲಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಭಾಷಣ ಮಾಡಲಿದ್ದಾರೆ.

ಅದಕ್ಕೂ ಮೊದಲು ಅವರು ಬೆಂಗಳೂರಿನ ಯಲಹಂಕ ಏರ್ಪೋರ್ಸ್ ಗೆ ಬಂದಿಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗಲಿದ್ದು, ಅದಕ್ಕೆ ವಾಹನ ಸವಾರರು ಬೇರೆ ಮಾರ್ಗ ನೋಡಿಕೊಳ್ಳುವುದು ಸೂಕ್ತ.

ತುಮಕೂರಿಗೆ ಮೋದಿ : ಸಿದ್ಧಗಂಗಾ ಮಠಕ್ಕೆ ಭೇಟಿ, ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ!

ಮೋದಿ ಅವರ ಗುರುವಾರದ ದಿನಚರಿ ಹೇಗಿದೆ..? ಯಾವೆಲ್ಲ ಮಾರ್ಗಗಳಲ್ಲಿ ಸಂಚರಿಸಲಿದ್ದಾರೆ. ಎನ್ನುವ ಸಂಪೂರ್ಣ ಟೈಮ್ ಲೈನ್ ಈ ಕೆಳಗಿನಂತಿದೆ.

ನಾಳೆ [ಗುರುವಾರ] ಮಧ್ಯಾಹ್ನ 1:20ಕ್ಕೆ ನವದೆಹಲಿಯಿಂದ ಬೆಂಗಳೂರಿನ ಯಲಹಂಕ ಏರ್ಪೋರ್ಸ್ ಗೆ ಆಗಮನ. ಮಧ್ಯಾಹ್ನ 1:25 ಕ್ಕೆ ಯಲಹಂಕ ಏರ್ಫೊರ್ಸ್ ನಿಂದ ಮಿಗ್ -17 ಮೂಲಕ ತುಮಕೂರು ಕಡೆ ಪ್ರಯಾಣ.
ಮಧ್ಯಾಹ್ನ 2:00 ಗಂಟೆಗೆ ತುಮಕೂರು ವಿವಿ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ಲ್ಯಾಡಿಂಗ್.
ಮಧ್ಯಾಹ್ನ 2:05 ನಿಮಿಷಕ್ಕೆ ತುಮಕೂರು ವಿವಿ ಹೆಲಿಪ್ಯಾಡ್ ನಿಂದ ಸಿದ್ದಗಂಗಾ ಮಠಕ್ಕೆ ಪ್ರಯಾಣ (ಸುಮಾರು 15 ನಿಮಿಷಗಳ ಕಾಲ ರಸ್ತೆ ನಿರ್ಬಂಧ).

ಮಧ್ಯಾಹ್ನ 2:15 ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ, ಶ್ರೀ ಗಳ ಗದ್ದುಗೆಗೆ ಗೌರವ ಸಲ್ಲಿಕೆ ನಂತರ ಸಿದ್ದಲಿಂಗ ಸ್ವಾಮೀಜಿಗಳ ಜತೆ ಮಾತುಕತೆ (3:20 ಕ್ಕೆ ಸಿದ್ದಗಂಗಾ ಮಠದಿಂದ ನಿರ್ಗಮಿಸುತ್ತಾರೆ.

ಮಧ್ಯಾಹ್ನ 3:30ಕ್ಕೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 6 ಕೋಟಿ ರೈತ ಕುಟುಂಬಗಳಿಗೆ ನೇರ ವರ್ಗಾವಣೆ ಹಾಗೂ ಕೃಷಿ ಕರ್ಮಣ್ ಪ್ರಶಸ್ತಿ ವಿತರಣೆ ಹಾಗೂ ಮೀನು ಸಾಗಣಿಕೆದಾರರ ಸೌಲಭ್ಯಗಳ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ.

ಸಂಜೆ 5:05.ಕ್ಕೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ನಿರ್ಗಮಿಸಿ ಸಂಜೆ 5:10 ತುಮಕೂರು ವಿವಿ ಹೆಲಿಪ್ಯಾಡ್ ಗೆ ಆಗಮಿಸಿ ಬೆಂಗಳೂರಿಗೆ ಪ್ರಯಾಣ.

ಸಂಜೆ 5:50 ಕ್ಕೆ ಬೆಂಗಳೂರಿನ ಹೆಚ್‌ಎಎಲ್ ಏರ್ಪೋರ್ಟ್ ಗೆ ಆಗಮಿಸಲಿದ್ದಾರೆ. ಸಂಜೆ 5:50 ಕ್ಕೆ ಹೆಚ್‌ಎಎಲ್ ನಿಂದ ಸುರಂಜನ ದಾಸ್ ರಸ್ತೆಯ ಡಿಆರ್‌ಡಿಓ ಯುವ ವಿಜ್ಙಾನಗಳ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸಂಜೆ 7:05 ನಿಮಿಷಕ್ಕೆ DRDOದಿಂದ ರಸ್ತೆ ಮೂಲಕ ನಿರ್ಗಮಿಸಿ ಸಂಜೆ 7:20 ಕ್ಕೆ ರಾಜಭವನಕ್ಕೆ ಆಗಮಿಸುತ್ತಾರೆ‌. (ಈ ಸಂದರ್ಭದಲ್ಲಿ ಸುರಂಜನ ದಾಸ್ ರಸ್ತೆ, ಹೆಚ್‌ಎಎಲ್ ರಸ್ತೆ, ಎಂ.ಜಿ ರಸ್ತೆ, ರಾಜಭವನ, ಸಂಚಾರ ನಿಷೇಧವಿರುತ್ತದೆ)

ಮರುದಿನ(ಶುಕ್ರವಾರ)ಬೆಳಗ್ಗೆ 9:40 ಕ್ಕೆ ರಾಜಭವನದಿಂದ ರಸ್ತೆ‌ ಮೂಲಕ ಜಿಕೆವಿಕೆಗೆ ಆಗಮಿಸಿ ಬೆಳಗ್ಗೆ 10:00 ರಿಂದ 11:05 ನಿಮಿಷದವರೆಗೆ 107 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.

ಬೆಳಗ್ಗೆ 11:10 ಕ್ಕೆ ರಸ್ತೆ ಮೂಲಕ HALಗೆ ಆಗಮನ, ಬೆಳಗ್ಗೆ 11:30 ಕ್ಕೆ HALನಿಂದ ದೆಹಲಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ.

. ಬಳ್ಳಾರಿ ರಸ್ತೆ, ಹೆಬ್ಬಾಳ ಫ್ಲೈ ಓವರ್, ಮೇಕ್ರಿ ಸರ್ಕಲ್, ಟ್ರಿನಿಟಿ ಸರ್ಕಲ್ ಮಾರ್ಗವಾಗಿ ಎಚ್ಎ‌‌ಎಲ್ ಗೆ ತೆರಳಲಿದ್ದಾರೆ. ಈ ಹಿನ್ನಲೆ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬದಲಿ ಮಾರ್ಗ ಬಳಸುವುದು ಒಳಿತು ಎಂಬುದು ಪೂರ್ವ ಮಾಹಿತಿಯಾಗಿದೆ.

TRENDING