ಕೆ.ಎಚ್.ಮುನಿಯಪ್ಲಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯ

ಕೋಲಾರ ರಾಜಕೀಯ ಸುದ್ದಿ

ಡಿ.31 – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನು ಮಾಡುವ ವಿಚಾರದಲ್ಲಿ ಡಿಕೆಶಿ, ಎಂ.ವಿ ಪಾಟಿಲ್, ಕೆ.ಹೆಚ್.ಮುನಿಯಪ್ಪರವರ ಹೆಸರು ಕೇಳಿಬರುತ್ತಿದ್ದು ಕೆ.ಹೆಚ್ ಮುನಿಯಪ್ಪರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಡಾ.ಅಶ್ವತ್ಥನಾರಾಯಣ ಒತ್ತಾಯಿಸಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 1991 ರಿಂದ ಸತತವಾಗಿ ಏಳು ಬಾರಿ ಸದಸ್ಯರಾಗಿ ಗೆದ್ದಿದ್ದ ಕೆ.ಹೆಚ್.ಮುನಿಯಪ್ಪ ಅವರು ಕೇಂದ್ರ ಸರ್ಕಾರದಲ್ಲಿ ಭಾರತ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಸಣ್ಣ ಕೈಗಾರಿಕೆ, ಮುಂತಾದ ಇಲಾಖೆಗಳಲ್ಲಿ ಮಂತ್ರಿಗಳಾಗಿ ಜಿಲ್ಲೆಯ ಅಭಿವೃದ್ದಿಯಲ್ಲಿ ಜನ ಮರೆಯಲಾಗದಂತಹ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ಕೆ.ಹೆಚ್.ಎಂ ಸ್ವಾತಂತ್ರ್ಯ ಕುಟುಂಬದಿಂದ ಹುಟ್ಟಿ ಬಂದಿದ್ದು ಇವರ ತಂದೆಯವರು ಸ್ವಾತಂತ್ರ್ಯ ಹೋರಾಟಗಾರರಾಗಿ ದುಡಿದಿರುವ ಇತಿಹಾಸವಿದೆ ಎಂದರು.

ಕೋಲಾರ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷ ಕಟ್ಟುವುದರಲ್ಲಿ ಶ್ರಮವಹಿಸಿದ್ದಾರೆ. ಹಿರಿತನದಲ್ಲಿ ಹಿರಿಯರಾಗಿ ಜನಸಾಮಾನ್ಯರೊಡನೆ ಸಾಮಾನ್ಯರಾಗಿ ಬೆರೆತು ನಿರಂತರವಾಗಿ ಜನರ ಸಂಪರ್ಕದಲ್ಲಿದ್ದು ಪಕ್ಷ ಸಂಘಟನೆ ಮಾಡಿದ್ದಾರೆ. ಹಾಗಾಗಿ ಈ ಬಾರಿ ಕೆ.ಹೆಚ್.ಮುನಿಯಪ್ಪರವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಾಗಿ ಪಕ್ಷದ ಎ.ಐ.ಸಿ.ಸಿ ಅಧ್ಯಕ್ಷರಾದ ಸೋನಿಯಗಾಂಧಿ, ರಾಹುಲ್ ಗಾಂದಿ ಮುಂತಾದ ನಾಯಕರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಸಿ ವಿಭಾಗದ ರಾಜ್ಯ ಸಂಚಾಲಕ ಎಂ.ವಿಜಯ್ ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಿ.ರಾಮಚಂದ್ರ ಬೆಗ್ಲಿ ಹೊಸಹಳ್ಳಿ ಉಪಸ್ಥಿತರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!