ಸಾಲಿಗ್ರಾಮ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಮಹಾನಗರದಲ್ಲಿ ಪ್ರತಿಭಟನೆ

ಬೆಂಗಳೂರು/ರಾಜ್ಯ ಸುದ್ದಿ

ಡಿ.23 – ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದ ದಲಿತರ ಬಡಾವಣೆಯಲ್ಲಿ ನಡೆದಿದ್ದ ದೌರ್ಜನ್ಯ ಖಂಡಿಸಿ ರಾಜ್ಯ ವ್ಯಾಪಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಪ್ರಕರಣ ಇದೀಗ ರಾಜಧಾನಿಗೆ ತಲುಪಿದೆ.

ದೌರ್ಜನ್ಯಕ್ಕೊಳಗಾಗಿದ್ದ ಸಾಲಿಗ್ರಾಮದ ದಲಿತರೊಂದಿಗೆ ದಲಿತ ಸಂಘಟನೆಗಳ ಒಕ್ಕೂಟ ಒಟ್ಟುಗೂಡಿ 12-12-19 ರಂದು ನಡೆದಿದ್ದ ಘಟನೆಯನ್ನು ಖಂಡಿಸಿ ದಲಿತರ ಸಮಗ್ರ ಅಭಿವೃದ್ದಿಗಾಗಿ ಒತ್ತಾಯಿಸಿದರು. ಅಲ್ಲದೇ ಪೊಲೀಸ್ ಠಾಣೆ ಎದುರಿನ ವೃತ್ತಕ್ಕೆ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲು ಆಗ್ರಹಿಸಿ ಇಂದು ಮಹಾನಗರದಲ್ಲಿ ಪ್ರತಿಭಟಿಸಲಾಯಿತು.

ಮಹಾನಗರದ ಆನಂದ್ ರಾವ್ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಲಿಗ್ರಾಮ ದಲಿತರ ಮೇಲಿನ ದೌರ್ಜನ್ಯ ಪ್ರಕರಣದ ದೂರುದಾರ ಲೋಕೇಶ್ ಮಾತನಾಡಿ ಘಟನೆ ನಡೆದ ನಂತರ ರಾಜ್ಯದ ಜನತೆಗೆ ಶಾಸಕ ಸಾ.ರಾ ಮಹೇಶ್ ರವರು ಘಟನೆ ಕುರಿತು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ಪ್ರಕರಣದ ಮೊದಲ ಆರೋಪಿಯಾಗಿರುವ ಶಾಸಕರ ತಮ್ಮ ಸಾ.ರಾ.ರಘು ತಲೆಮರೆಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಶಾಸಕ ಸಾರಾ ಮಹೇಶ್ ರವರಿಗೆ ಮರ್ಯಾದೆ ಎನ್ನುವುದು ಇದ್ದರೆ ಸಾ.ರಾ ರಘು ಅವರನ್ನು ಪೋಲಿಸರಿಗೆ ಒಪ್ಪಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Share Post

Leave a Reply

Your email address will not be published. Required fields are marked *

error: Content is protected !!