ಕನಗನಮರಡಿ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರ ಇಂದಿನ ಸ್ಥಿತಿ ಹೇಗಿದೆ ಗೊತ್ತಾ ?

ಮಂಡ್ಯ : ಕನಗನಮರಡಿ ದುರಂತ. ಈ ದುರ್ಘಟನೆಯನ್ನು ಯಾರು ಮರೀತಾರೆ ಹೇಳಿ. ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ಸಂಭವಿಸಿದ್ದ ಘಟನೆಯಲ್ಲಿ 30 ಮಂದಿ ಜಲಸಮಾಧಿ ಆಗಿದ್ದರು. ಸದ್ಯ ಅವರನ್ನು ಕಳೆದುಕೊಂಡ ಕುಟುಂಬದ ಪರಿಸ್ಥಿತಿ ಹೇಗಿದೆ. ಈ ಕುರಿತ ಒಂದು ರಿಪೋರ್ಟ್​ ಇಲ್ಲಿದೆ.

ಅವತ್ತು 2018 ನವೆಂಬರ್ 24. ಮಂಡ್ಯ ಜಿಲ್ಲೆಯ ಪಾಂಡವಪುರ ಬಸ್ ನಿಲ್ದಾಣದಿಂದ ಶಿವಳ್ಳಿ ಹೋಬಳಿ ಕಡೆಗೆ ಕನಕನಮರಡಿ ಗ್ರಾಮದ ಮಾರ್ಗವಾಗಿ ಮಂಗಳೂರಿನ ಬಸ್ ಏಜೆನ್ಸಿಯ ರಾಜಕುಮಾರ ಅನ್ನೋ ಡಕೋಟ ಖಾಸಗಿ ಬಸ್ ಹೊರಟಿತ್ತು. ಆಗ ಸಮಯ ಮಧ್ಯಾಹ್ನ 12.16 ಚಾಲಕನ ನಿಯಂತ್ರಣ ತಪ್ಪಿದ ಆ ಬಸ್ ಕನಕಗನಮರಡಿ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಯೊಳಗೆ ಬಿದ್ದಿತು. ಪರಿಣಾಮ ಬಸ್ ನಲ್ಲಿದ್ದ 33 ಮಂದಿ ಪೈಕಿ ಡ್ರೈವರ್, ಒಬ್ಬ ಬಾಲಕ ಮತ್ತು ಒಬ್ಬ ಯುವಕನನ್ನು ಹೊರತು ಪಡಿಸಿ ಉಳಿದ ಮೂವತ್ತು ಮಂದಿ ಕೇವಲ ಮೂರೇ ನಿಮಿಷದಲ್ಲಿ ಜಲಸಮಾಧಿಯಾಗಿದ್ದರು. ಆ ಬಸ್ ನಲ್ಲಿ ಶಾಲಾ ಮಕ್ಕಳು, ಹಸುಗೂಸುಗಳು, ವೃದ್ಧರು, ಮಹಿಳೆಯರು ಹೀಗೆ ಎಲ್ಲರೂ ಇದ್ದರು.

ಘಟನೆಯಾದಂತಹ ಬಳಿಕ ಕೆಲ ತಿಂಗಳ ಗಳ ಕಾಲ ಗ್ರಾಮಸ್ಥರು ಘಟನೆ ನಡೆದ ಸ್ಥಳಕ್ಕೇ ಹೋಗುವುದನ್ನು ಬಿಟ್ಟರು. ಕೆಲ ಕಿಡಿಗೇಡಿಗಳಂತೂ ಸತ್ತವರು ದೆವ್ವಗಳಾಗಿದ್ದಾರೆಂದು ಹಬ್ಬಿಸಿದ್ರು. ಜೊತೆಗೆ ಆ ನಾಲೆಗೆ ತಡೆಗೋಡೆ ಇಲ್ಲದಿರುವುದೇ ಬಸ್ ನಾಲೆಗೆ ಉರುಳಲು ಪ್ರಮುಖ ಕಾರಣ ಆಗಿತ್ತು. ಆದ್ರೆ ಇದೀಗ ಅಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿದ್ದು, ಇಡೀ ಪಾಂಡವಪುರ ತಾಲ್ಲೂಕಿನಾದ್ಯಂತ ಖಾಸಗಿ ಬಸ್ ಗಳನ್ನು ನಿಷೇಧಿಸಿ ಸರ್ಕಾರಿ ಬಸ್ ಗಳನ್ನು ಹಾಕಲಾಗಿದೆ.

ವಿಚಿತ್ರ ಎಂದ್ರೆ ಈ ಘಟನೆ ನಡೆದ ದಿನವೇ 30 ಮಂದಿ ಸಾವನ್ನಪ್ಪಿದ ವಿಷಯ ಕೇಳಿ ಗದ್ಗದಿತರಾಗಿದ್ದ ಮಂಡ್ಯದ ಗಂಡು ಅಂಬರೀಷ್ ಸಹ ಮೃತಪಟ್ಟಿದ್ದರು. ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಒಂದೇ ದಿನ ಎರಡು ಬಹುದೊಡ್ಡ ದುರಂತ ನಡೆದಂತಾಗಿದ್ದು ವಿಷಾದವೇ ಸರಿ. ಜನ ಘಟನೆಯನ್ನು ಇನ್ನೂ ಮರೆತಿಲ್ಲವಾದರೂ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದೆ ಇಂತಹ ಘಟನೆಯಾಗದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.

ಒಟ್ಟಾರೆ ಕನಗನಮರಡಿ ದುರಂತ ನಡೆದು ವರ್ಷ ಕಳೆದರೂ ಅದರ ಕರಾಳ ನೆನಪು ಮಾತ್ರ ಜನರಲ್ಲಿ ಮಾಸಿಲ್ಲ. ಇಂತಹ ಘಟನೆ ಕನಸಿನಲ್ಲೂ ಮರುಕಳಿಸುವುದು ಬೇಡ ಎಂಬುದೇ ಇಲ್ಲಿಯ ಜನರ ಬೇಡಿಕೆ.

  • ಬಲ್ಲೇನಹಳ್ಳಿ ಸಂತೋಷ್ ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!