ಟಿಪ್ಪರ್ ಹರಿದು ಮಗು ಸಾವು

ಆನೇಕಲ್ : ಆಟವಾಡುತ್ತಿದ್ದ ಮಗುವಿನ ಮೇಲೆ ಟಿಪ್ಪರ್ ಹರಿದ ಪರಿಣಾಮ ಮಗುವು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಗುಡ್ನಹಳ್ಳಿಯಲ್ಲಿ ನಡೆದಿದೆ.

ಸುಂದರಂ(01) ಟಿಪ್ಪರ್ ಹರಿದು ಮೃತಪಟ್ಟ ಮದಗು. ಉತ್ತರಪ್ರದೇಶ ಮೂಲದ ಬಾಲ್ ಮಿಕ್ಕಿ ಹಾಗೂ ಶಕ್ತಿ ದಂಪತಿಯ ಪುತ್ರ ಎಂದು ಗುರುತಿಸಲಾಗಿದೆ. ಟಿಪ್ಪರ್ ಮಗುವಿನ ತಲೆ ಮೇಲೆ ಹರಿದು ಕ್ಷಣಾರ್ಧದಲ್ಲೇ ಮಗು ಮೃತಪಟ್ಟಿದೆ.

ದಂಪತಿಗಳು ಗುಡ್ನಹಳ್ಳಿಯ ಶ್ರೀ ಲಕ್ಷ್ಮಿ ಬ್ರಿಕ್ಸ್ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುತ್ತಾ ಅಲ್ಲೇ ಮೂರು ಮಕ್ಕಳೊಂದಿಗೆ ವಾಸವಿದ್ದರು.

ಇಟ್ಟಿಗೆ ಕಾರ್ಖಾನೆಗೆ ಸೇರಿದ್ದ ಟಿಪ್ಪರ್ ಚಾಲಕನ ಅಜಾಗರುಕತೆಯಿಂದ ಘಟನೆ ನಡೆದಿದ್ದು ಟಿಪ್ಪರ್ ಚಾಲಕ ಕಮಾಲ್ ಅನ್ಸಾರಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಆನೇಕಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಹಮಕೊಂಡ‌ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!