ಕೇಂದ್ರ ಸರ್ಕಾರದ ವಿರುದ್ಧ ಸಹಕಾರಿ ಸಂಘ ಸಂಸ್ಥೆಗಳಿಂದ ಪ್ರತಿಭಟನೆ

ಬಾಗಲಕೋಟೆ : ಸಹಕಾರಿ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಟಿಡಿಎಸ್ ಹಾಗೂ ಜಿ ಎಸ್ ಟಿ ರದ್ದುಗೊಳಿಸುವ ಮೂಲಕ ಸಂಸ್ಥೆಗಳನ್ನು ಉಳಿಸಬೇಕು ಎಂದು ಒತ್ತಾಯಿಸಿ ಸಹಕಾರಿ ಸಂಘ ಸಂಸ್ಥೆಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟ‌ನೆ ನಡೆಸಿದರು.

ಬಾಗಲಕೋಟ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ರಬಕವಿ ನಗರದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಗ್ರೇಟ್-2 ತಹಶೀಲ್ದಾರ್ ಎಸ್.ಬಿ.ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು.

ಸಹಕಾರ ಕ್ಷೇತ್ರವು ಈ ದೇಶದ ಕೃಷಿಕರು ಮಧ್ಯಮ ವರ್ಗದವರ ಹಾಗೂ ಕಡುಬಡವರಿಗೆ ಸೇವೆ ನೀಡುವ ಕ್ಷೇತ್ರವಾಗಿದೆ. ಕಳೆದ 110 ವರ್ಷಕ್ಕಿಂತ ಹೆಚ್ಚು ಕಾಲದಿಂದ ಸಹಕಾರ ಸಂಸ್ಥೆಗಳು ಈ ದೇಶದ ಆರ್ಥಿಕ ವ್ಯವಸ್ಥೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ.

ಕೇಂದ್ರ ಸರ್ಕಾರವು ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಜಿಎಸ್‌ಟಿ ಹಾಗೂ ಟಿಡಿಎಸ್ ವಿಧಿಸಿರುವುದು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ತೊಡಕು ಉಂಟು ಮಾಡುತ್ತಿದೆ. ಸಹಕಾರ ಸಂಸ್ಥೆಗಳ ಮೇಲೆ ಟಿಡಿಎಸ್ ವಿಧಿಸುವುದರಿಂದ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 52 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು ಅಭಿವೃದ್ಧಿಯಲ್ಲಿ ಹಿನ್ನಡೆ ಉಂಟಾಗುತ್ತದೆ. ಸಹಕಾರ ಕ್ಷೇತ್ರದಲ್ಲಿ ಕೋಟ್ಯಾಂತರ ಜನರು ಸದಸ್ಯರಿದ್ದು ಲಕ್ಷಾಂತರ ಉದ್ಯೋಗ ಅವಕಾಶವನ್ನು ಕಲ್ಪಿಸಿದೆ.

ಕೂಡಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಸಹಕಾರಿ ಸಂಘಗಳ ಮೇಲೆ ಜಿ ಎಸ್ ಟಿ ಟಿಡಿಎಸ್ ಹಾಗೂ ಆದಾಯ ತೆರಿಗೆ ಹೇರಿದ ನಿರ್ಬಂಧವನ್ನು ವಾಪಸಗ ಪಡೆಯಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಸಹಕಾರ ಸಂಘಗಳ ಮೇಲೆ ಹೇರಿರುವ ಆದಾಯ ತೆರಿಗೆಯ ನಿರ್ಬಂಧದಿಂದ ಸಂಘ-ಸಂಸ್ಥೆಗಳು ಸಾವಿನ ಅಂಚಿನಲ್ಲಿ ಬದುಕುತ್ತಿವೆ. ಅವುಗಳನ್ನು ಕೊಲ್ಲಲಾರದೆ ಬದುಕಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಮ್.ಬಿ.ನಾಶಿ, ಚಿದಾನಂದ ಗಾಳಿ, ಹೂಲಿ ಸರ, ಮಲ್ಲಿಕಾರ್ಜುನ ಸಾಬೋಜಿ, ಸಂಗಯ್ಯ ಅಮ್ಮನಗಿಮಠ, ಬಸವರಾಜ ಯೆಂಡಿಗೆರಿ, ನೀಲಕಂಠ ಮುತ್ತುರ, ಡಾ.ಸಾಬೋಜಿ, ಲಡ್ಡಾ, ಚಿತ್ತರಗಿ ಮಾಹಾದೇವ ಬಾಪುರೆ ಭದ್ರಣ್ಣವರ, ಈರಣ್ಣ ಗುಣಕಿ, ಮಲ್ಲಿಕಾರ್ಜುನ ಬೆಳಗಲಿ, ರಮೇಶ ತೇಲಿ, ಬಸವರಾಜ ಬೆನ್ನಿ, ಬಸವರಾಜ ನಾಗರಾಳ, ರವಿ ಜಿಡ್ಡಿಮನಿ, ಮುಗತಿ, ಗಂಗಾಧರ ಉಕ್ಕಲಿ, ಸಂಜೆಯ ತೇಲಿ ಬಾಲಚಂದ್ರ ಪಾಟೀಲ, ವಿರುಪಾಕ್ಷಯ್ಯ ಕೋಕಟನೋರ, ಗೋಡಚಪಾ ಹೊಸಕೋಟೆ, ರಾಮದಾಸ ಸಿಂಘನ, ರಾಜೇಂದ್ರಕುಮಾರ, ಬಸವರಾಜ ತೇಗಿ ಸೇರಿದಂತೆ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ನೂರಾರು ಸಿಬ್ಬಂದಿಗಳು ಹಾಜರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!