ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಕೇಂದ್ರ ಸಚಿವ ಗಡ್ಕರಿಗೆ ಬಿಎಸ್‌ವೈ ಸ್ವಾಗತ

ಬೆಂಗಳೂರು : ಮಹಾನಗರಕ್ಕೆ ಆಗಮಿಸಿದ ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ಉಭಯ ನಾಯಕರು ರಾಜ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡರು. ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಸಚಿವ ಗೋವಿಂದ ಎಂ ಕಾರಜೋಳ, ಕೈಗಾರಿಕಾ ಸಚಿವ ಜಗದೀಶ್ ಎಸ್. ಶೆಟ್ಟರ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಮುಖ್ಯಾಂಶಗಳು

ಈಗಾಗಲೇ ಚಾಲ್ತಿಯಲ್ಲಿರುವ ಕಾಮಾಗಾರಿಗಳನ್ನು ಆದಷ್ಟು ಬೇಗ ಮುಗಿಸುವಂತೆ ಕಂಟ್ರಾಕ್ಟರ್ ಗಳಿಗೆ ಸೂಚಿಸಲಾಯಿತು.

ಹೊಸ ಮಾರ್ಗಗಳಿಗೆ ಸಂಬಂಧಿಸಿದಂತೆ ಭೂಮಿ‌ ಲಭ್ಯತೆ ಹಾಗು ಸ್ವಾಧೀನ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಸಲಾಯಿತು.

ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆದಾರದ ಮೇಲೆ ನೇಮಕ‌ ಮಾಡಿಕೊಂಡು ಭೂಸ್ವಾದೀನ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲು ಸೂಚಿಸಲಾಯಿತು.

ಇದೇ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಹಿಂದಿನ ಸರ್ಕಾರ ಇದ್ದ ವೇಳೆ ಕಾಮಗಾರಿ ವೇಗವಾಗಿ ಮಾಡಲಿಲ್ಲ ಅಂತ ಹೇಳಿದರು. ಇದಕ್ಕೆ ಗರಂ ಕೇಂದ್ರ ಸಚಿವರು ಅಬ್ ಕಿ ಬಾದ್ ಯಡಿಯೂರಪ್ಪ ಬಿಜೆಪಿ ಸರ್ಕಾರ್ ಹೈ ಕುಚ್ ಸಬೂಬ್ ಮತ್ ಬೋಲ್‌ನ ತುರಂತ್ 1500 ಕಿಲೋಮೀಟರ್ ಪೂರಾ ಕರಕೆ ಹ್ಯಾಂಡ್ ಓವರ್ ಕರೋ ಅಂತ ಹೇಳಿದರು.

Share Post

Leave a Reply

Your email address will not be published. Required fields are marked *

error: Content is protected !!