ಇಂದಿನ ಫಲಿತಾಂಶ ಕಾರ್ಯಕರ್ತರಿಗೆ ಸಂದ‌ ಜಯ : ವಿಜಯೇಂದ್ರ

ಮಂಡ್ಯ : ಬಿಜೆಪಿ ಗೆಲುವು ತುಂಬಾ ಆನಂದ ಹಾಗೂ ನೆಮ್ಮದಿ ತಂದಿದ್ದು ಹದಿನೈದು ದಿನಗಳಿಂದ ಕಷ್ಟಪಟ್ಟ ನಮ್ಮ ಕಾರ್ಯಕರ್ತರಿಗೆ ಸಂದ ಜಯ ಇದಾಗಿದೆ ಎಂದು ಸಿಎಂ ಯಡ್ಡಿಯೂರಪ್ಪ ಪುತ್ರ ವಿಜಯೇಂದ್ರ ಹೇಳಿದರು.

ಕೆಆರ್ ಪೇಟೆಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ವಿಜೆಯೇಂದ್ರ ಈ ಗೆಲುವು ನಮಗೆ ಆನೆ ಬಲ ತಂದಿದೆ ಎಂದು ಹೇಳಿದರು.

ಕ್ಷೇತ್ರವನ್ನ ಅಭಿವೃದ್ಧಿಪಡಿಸುವ ತಂದೆಯವರ ಕನಸಿಗೆ ಜನರು ಸಹಕರಿಸಿದ್ದಾರೆ. ಹುಟ್ಟೂರಿನಲ್ಲಿ ಗೆಲ್ಲಬೇಕು ಅನ್ನೋ ಆಸೆ ತಂದೆಯವರಲ್ಲಿತ್ತು ಅದು ಇಂದು ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಈ ಗೆಲುವು ಸಲ್ಲುತ್ತದೆ ಎಂದು ಅವರು ತಿಳಿಸಿದರು.

Share Post

Leave a Reply

Your email address will not be published. Required fields are marked *

error: Content is protected !!