ಹಿಪ್ಪರಗಿ ಅಣೆಕಟ್ಟೆಯಿಂದ 1.5 ಟಿಎಂಸಿ ನೀರು ಪೋಲು

ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಆಣೆಕಟ್ಟಿನಿಂದ ಗೇಟ್ ದುರಸ್ತಿ ಇದ್ದ ಕಾರಣ ಅಪಾರ ಪ್ರಮಾಣದ ನೀರು ನದಿ ಮೂಲಕ ಪೋಲಾಗಿರುವುದು ಕಂಡು ಬಂದಿದೆ

ಕಳೆದ ನ.28 ರಂದು ಆಣೆಕಟ್ಟೆಯಿಂದ ಸಾಮರ್ಥ್ಯಕ್ಕೂ ಅಧಿಕವಾಗಿ ಸಂಗ್ರಹವಾದ ನೀರುನ್ನು ಕೆಳಗಡೆ ಗೇಟ್‌ಗಳನ್ನು ತೆಗೆದು ಬಿಡುವ ಸಂದರ್ಭದಲ್ಲಿ 11 ನೇ ಗೇಟ್ ಸರಿಯಾಗಿ ಮುಚ್ಚದೆ ತಾಂತ್ರಿಕ ಗೊಂದರೆಯಾಗಿ ನೀರು ಪೋಲಾಗಲು ಪ್ರಾರಂಭವಾಗಿತ್ತು ಎನ್ನಲಾಗಿದೆ.
 
ಬೇಸಿಗೆ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಗೇಟ್‌ಗಳ ಬಗ್ಗೆ ಸಂಪೂರ್ಣ ಅರಿವು ಮಾಡಿಕೊಂಡು ಅದರ ಗುಣಮಟ್ಟ, ದುರಸ್ತಿ ಕುರಿತು ಜಾಗೃತರಾಗಬೇಕಾಗಿದೆ.

ಈಗ ನದಿಯಿಂದ ಅಪಾರ ಪ್ರಮಾಣದ ನೀರು ಹರಿದು ಹೋಗಿದೆ. ಬೇಸಿಗೆಯಲ್ಲಿ ಒಂದು ತಿಂಗಳಿಗೆ ಆಗುವಷ್ಟು ನೀರು ಪೋಲಾಗಿದೆ. ರಬಕವಿ ಮಹೇಶವಾಡಗಿ ಸೇತುವೆ ಬಳಿ 5ಅಡಿಗಳಷ್ಟು ನೀರು ತಳಮಟ್ಟಕ್ಕೆ ಹೋಗಿದೆ. ಇದರಿಂದ ರೈತರು ಆತಂಕ ಗೊಂಡಿದ್ದಾರೆ.

ಹಿಪ್ಪರಗಿ ಆಣೆಕಟ್ಟೆಯಲ್ಲಿನ 11 ನೇ ಗೇಟ್‌ನಲ್ಲಿ ತಾಂತ್ರಿಕೆ ತೊಂದರೆಯಾಗಿ ಅದರಲ್ಲಿನ ರೋಲ್ ಜಾಮ್ ಆಗಿ 1.5 ಟಿಎಂಸಿ ಕೆಳಗಡೆ ಹೋಗಿದೆ. ನೀರಿನ ಒತ್ತಡ ಹೆಚ್ಚಾಗಿದ್ದರಿಂದ ಗೇಟ್ ಮರು ಅಳವಡಿಸುವುದು ತುಂಬಾ ತೊಂದರೆಯಾಯಿತು. ಈಗ ತುರ್ತು ಸಂದರ್ಭದಲ್ಲಿ ಬಳಸಬಹುದಾದ ಪ್ರಮುಖ ಗೇಟ್ ಬಳಸಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ನಾವು ಮತ್ತು ನಮ್ಮ ಸಿಬ್ಬಂದಿ ಊಟ ನಿದ್ರೆ ಇಲ್ಲದೆ ಶ್ರಮ ಪಟ್ಟು ಡಿ.೧ ರ ಬೆಳಿಗ್ಗೆ ೫ ಗಂಟೆಗೆ ನೀರು ಡ್ಯಾಂ ನಿಂದ ಹರಿದು ಹೋಗದಂತೆ ದುರಸ್ತಿ ಮಾಡಿ ಮುಗಿಸಿದ್ದೇವೆ ಎಂದು ಹಿಪ್ಪರಗಿ ಜಲಾಶಯದ ಅಸಿಸ್ಟೆಂಟ್ ಇಂಜಿನಿಯರ್ ಎಸ್. ನಾಯಿಕ ತಿಳಿಸಿದ್ದಾರೆ.

ಈಗ ಆಣೆಕಟ್ಟೆಯಲ್ಲಿ 4.30 ಟಿಎಂಸಿ ನೀರು ಸಂಗ್ರಹವಿದೆ. ಒಟ್ಟು 5 ಟಿಎಂಸಿ ಸಂಗ್ರಹ ಇರಬೇಕಿತ್ತು, ಆದರೆ ಇನ್ನೂ ನದಿಗೆ ಮೇಲ್ಭಾಗದಿಂದ ಅನೇಕ ಹಳ್ಳಗಳಿಂದ ನೀರು ದಿನೇ ದಿನೇ ಹರಿದು ಬಂದು ಸಂಗ್ರಹವಾಗುತ್ತಿದೆ. ನಮ್ಮ ಆಣೆಕಟ್ಟಿನ ಸಾಮರ್ಥ್ಯಕ್ಕೆ ಎಷ್ಟು ಬೇಕು ಅಷ್ಟು ನೀರು ಒಂದು ವಾರದಲ್ಲಿ ಸಂಗ್ರಹವಾಗುತ್ತದೆ. ಬೆಸಿಗೆ ಸಂದರ್ಭದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ 11 ನೇ ಗೇಟ್ ದುರಸ್ತಿ ಮಾಡಿಕೊಳ್ಳುತ್ತೇವೆ. ಜನರು ಉಹಾಪೋಕ್ಕೆ ಕಿವಿಗೊಡಬೇಡಿ. ಅಧಿಕಾರಿಗಳಾಗಿ ಅತೀ ಜವಾಬ್ದಾರಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!