ಕೆ.ಆರ್.ಪೇಟೆ ಉಪಕದನದಲ್ಲಿ ತ್ರಿಪಕ್ಷಗಳ ಪ್ರಚಾರ ಅಬ್ಬರ

ಮಂಡ್ಯ : ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ ಎರಡೇ ದಿನ ಬಾಕಿ ಇದ್ದು, ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಅಬ್ಬರ ತುಂಬಾ ಜೋರಾಗಿದೆ. ಚುನಾವಣೆಯ ಅಬ್ಬರದ ಕುರಿತ ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಕೆ.ಆರ್.ಪೇಟೆ ಉಪ ಕದನದಲ್ಲಿ ಇಂದು ಮೂರು ಪಕ್ಷಗಳ ಭರಾಟೆ ತುಂಬಾ ಜೋರಾಗಿತ್ತು. ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರ ಜೆಡಿಎಸ್ ಬೃಹತ್ ಸಮಾವೇಶವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹಂಚಿದ್ದ ಸೀರೆಯನ್ನು ಪ್ರದರ್ಶನ ಮಾಡಲಾಯಿತು.

ಸಮಾವೇಶಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬರಬೇಕಿತ್ತು. ಆದ್ರೆ ಹವಮಾನ ವೈಪರೀತ್ಯದಿಂದ ಎಚ್ಡಿಕೆ ಮೊಬೈಲ್ ಮೂಲಕ ಚಿಕ್ಕಬಳ್ಳಾಪುರದಿಂದ ಮಾತನಾಡಿದರು. ಮಾಜಿ ಸಚಿವ ಪುಟ್ಟರಾಜು ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಪರ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಸುದ್ದಿಗೋಷ್ಟಿ ನಡೆಸಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು. ರೇವಣ್ಣ ದೇವೇಗೌಡರ ಮಗ ಹಾಗೂ ಕುಮಾರಸ್ವಾಮಿ ಅವ್ರ ಅಣ್ಣ ಎಂಬ ಕಾರಣಕ್ಕೆ ವರ್ಚಸ್ಸಿದೆ. ಅದನ್ನ ಬಿಟ್ರೆ ಇವ್ರಿಗೆ ಯಾವ ಐಡೆಂಟಿಟಿಯು ಇಲ್ಲ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಪರ ಸಿಎಂ ಪುತ್ರ ವಿಜಯೇಂದ್ರ ಹಾಗೂ ಡಿಸಿಎಂ ಅಶ್ವತ್ ನಾರಾಯಣ್ ‘ನವ ಕೃಷ್ಣರಾಜಪೇಟೆಗೆ ಬಿಜೆಪಿ’ ಎಂಬ ಘೋಷ ವಾಕ್ಯದಡಿ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ ಯಾಚಿಸಿ ಅಭ್ಯರ್ಥಿಗೆ ಮತ ಹಾಕಬೇಕೆಂದು ಮನವಿ ಮಾಡಿದರು.

ಒಟ್ಟಾರೆ ನಾಳೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಅಭ್ಯರ್ಥಿಗಳ ಪರ ನಾಯಕರ ಭರಾಟೆ ಜೋರಾಗಿತ್ತು. ನಾಳೆಯೂ ಸಹ ಪ್ರಚಾರ ವೈಖರಿ ಸಹಜವಾಗಿಯೇ ಹೆಚ್ಚಾಗಿರಲಿದೆ.

  • ಸಂತೋಷ್ ಬಲ್ಲೇನಹಳ್ಳಿ ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!