ನಾಲ್ಕು ದಿನಗಳಿಂದ ಕಡಿತಗೊಂಡಿದ್ದ ನೀರು ಸರಬರಾಜು ಪುನರಾರಂಭ

ಕೋಲಾರ : ನಗರಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದ ಖಾಸಗಿ ಬೋರ್ ವೆಲ್ ಗೆ ಕಂಪನಿಯ ವಿದ್ಯುತ್ ಮೀಟರ್‌ಗಳನ್ನು ಬೆಸ್ಕಾಂ ವಶಕ್ಕೆ ಪಡೆದ ಹಿನ್ನಲೆ ನಗರಕ್ಕೆ ನೀರಿಲ್ಲದಂತಾಗಿ ನಗರಸಭೆಗೆ ತಲೆ ನೋವಾಗಿ ಪರಿಣಮಿಸಿತ್ತು.

ಕಳೆದ ನಾಲ್ಕು ದಿನಗಳ ಹಿಂದೆ ಬೆಸ್ಕಾಂ ಜಾಗೃತ ದಳದ ಹಿರಿಯ ಅಧಿಕಾರಿಗಳ ತಂಡ ಬೋರ್‌ವೆಲ್‌ಗೆ ದಿಢೀರ್ ಭೇಟಿ ನೀಡಿ ವಿದ್ಯುತ್ ಮೀಟರ್‌ಗಳನ್ನು ವಶಪಡಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ನೀರಿಲ್ಲದೆ ಪರದಾಡಿದ ಸಾರ್ವಜನಿಕರು ನಗರಸಭೆಯ ಮೇಲೆ ಒತ್ತಡ ಹೇರಿದ್ದರು.

ಎಚ್ಚೆತ್ತ ನಗರಸಭೆಯ ಆಯುಕ್ತ ಶ್ರೀಕಾಂತ್ ಈ ವಿಷಯವನ್ನು ಸ್ಥಳೀಯ ಶಾಸಕ ಶ್ರೀನಿವಾಸಗೌಡ ಸೇರಿದಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಈ ಬಗ್ಗೆ ಶ್ರೀನಿವಾಸಗೌಡ ಅವರು‌ ಬೆಸ್ಕಾಂ ಎಸ್.ಪಿ ರವರನ್ನು ಸಂಪರ್ಕಿಸಿ ಸಮಸ್ಯೆಯ ಕುರಿತು ಮಾತನಾಡಿದ್ದರು. ಶಾಸಕರ ಮನವಿಯನ್ನು ಪುರಸ್ಕರಿಸಿದ ಬೆಸ್ಕಾಂ ಅಧಿಕಾರಿಗಳು ಪುನಃ ಎಂದಿನಂತೆ ನಗರಕ್ಕೆ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಎಂದಿನಂತೆ ನಗರಸಭೆಯ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಿದೆ ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!