ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸಿ ಬಿಎಸ್‌ವೈಗೆ ಉಡುಗೊರೆ ನೀಡಿ : ವಿಜಯ್‌ಶಂಕರ್

ಕೃಷ್ಣರಾಜಪೇಟೆ : ರಾಜ್ಯದ ಬಿಜೆಪಿ ಸರ್ಕಾರದ ಸುಭದ್ರತೆಗೆ ಹಾಗೂ ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಗೆ ಕ್ಷೇತ್ರದ ಜನತೆ ರಾಜಕೀಯ ಜಾಣ್ಮೆಯನ್ನು ಪ್ರದರ್ಶನ ಮಾಡಿ ಕಮಲವನ್ನು ಅರಳಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತವರಿನ ಉಡುಗೊರೆಯನ್ನು ನೀಡಬೇಕು ಎಂದು ಮಾಜಿ ಸಚಿವ ವಿಜಯಶಂಕರ್ ಮನವಿ ಮಾಡಿದರು.

ಕ್ಷೇತ್ರದಲ್ಲಿ ಬಿರುಸಿನ ಮತಪ್ರಚಾರ ನಡೆಸಿದ ಸಿ.ಹೆಚ್.ವಿಜಯಶಂಕರ್ ಬಳಿಕ ಸುದ್ದಿಗಾರರೊಡನೆ ಮಾತನಾಡಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಈ ಸಂದರ್ಭದಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಬಿಜೆಪಿ ಪಕ್ಷದ ಶಾಸಕರನ್ನು ಆಯ್ಕೆ ಮಾಡಿದರೆ ಸಂಪಟದಲ್ಲಿ ಮಂತ್ರಿಗಳಾಗಿ ಸಮರ್ಥವಾಗಿ ತಾಲ್ಲೂಕು ಹಾಗೂ ಜಿಲ್ಲೆಯನ್ನು ಮುನ್ನಡೆಸುತ್ತಾರೆ ಎಂದು ಅವರು ಹೇಳಿದರು.

ತಾಲ್ಲೂಕಿನಾದ್ಯಂತ ಬದಲಾವಣೆಯ ಗಾಳಿಯು ಬೀಸುತ್ತಿದೆ. ನಾರಾಯಣಗೌಡರು ವಿಜಯಶಾಲಿಯಾಗುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಅಭಿವೃದ್ಧಿ ಪರ್ವಕ್ಕೆ ತಾಲ್ಲೂಕಿನ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ವಿಜಯಶಂಕರ್ ನಾರಾಯಣಗೌಡರು ಜನತೆಯ ಆಶೀರ್ವಾದದ ಬಲದಿಂದ ಶಾಸಕರಾಗಿ ಜಿಲ್ಲಾ ಮಂತ್ರಿಯಾಗಿ ಕೆಲಸ ಮಾಡಿ ತಾಲ್ಲೂಕಿನ ಋಣವನ್ನು ತೀರಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಜೆ.ವಿಜಯಕುಮಾರ್, ಮುಖಂಡರಾದ ಕಬ್ಬಾಳು ಈರಪ್ಪ, ಅಗ್ರಹಾರಬಾಚಹಳ್ಳಿ ಜಗದೀಶ್ ಮತ್ತು ಕೊಪ್ಪಲು ಶಿವಣ್ಣ ಉಪಸ್ಥಿತರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!