ಕಾಗವಾಡ ಉಪಚುನಾವಣೆ : ಬಿಜೆಪಿ ಅಭ್ಯರ್ಥಿ ಪರ ಬಿಎಸ್‌ವೈ ರಣಕಹಳೆ

ಕಾಗವಾಡ : ಕ್ಷೇತ್ರದಲ್ಲಿ ಶ್ರೀಮಂತ ಪಾಟೀಲ್ ಅಭಿವೃದ್ಧಿ ಕಾರ್ಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಅವರನ್ನು ಗೆಲ್ಲಿಸಿದರೆ ಮಂತ್ರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದರು.

ಉಪಚುನಾವಣೆ ಹಿನ್ನಲೆ ಕಾಗವಾಡ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಂಡು ಮಾತನಾಡಿದರು.‌

ಬಸವೇಶ್ವರ ಎತ ನೀರಾವರಿ ಕುಂಬಕರ್ಣ ರೀತಿಯಲ್ಲಿ ನಡಿತಾ ಇದೆ. ಚುನಾವಣೆ ನಂತರ ನಾನೇ ಬಂದು ಆ ಗುತ್ತಿಗೆದಾರನನ್ನು ತೆಗೆದು ಕಾಮಗಾರಿಯನ್ನ ಶೀಘ್ರ ಪೂರ್ಣ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣೆ ಬಳಿಕ ಮಹಾರಾಷ್ಟ್ರ ಮುಖ್ಯ ಮಂತ್ರಿಯನ್ನು ಭೇಟಿಮಾಡಿ ನಾಲ್ಕು ಟಿಎಂಸಿ ನೀರಿಗಾಗಿ ನಾನೆ ಅಗ್ರಿಮೆಂಟ್ ಮಾಡಿ ಕೊಡುತ್ತೇನೆ. ಚುನಾವಣೆ ಫಲಿತಾಂಶ ಬಂದ ಮಾರನೆ ದಿನದಿಂದ ರಾಜೀನಾಮೆ ನೀಡಿ ಬಂದ ಎಲ್ಲಾ ಶಾಸಕರ ಗೌರವದಿಂದ ತಲೆ ಎತ್ತಿ ನಡೆಯುವಂತಹ ಕೆಲಸ ಮಾಡುತ್ತೇನೆ ಎಂದು ಭರವಸೆಗಳ ಮಹಾಪೂರವನ್ನೇ ಹರಿಸಿದರು.

ಡಿಸಿಎಂ ಸವದಿ ಮಾತನಾಡಿ ಕಾರ್ಯಕರ್ತರಲ್ಲಿ ಹಳೆಯ ಹೊಸ ಕಾರ್ಯಕರ್ತರು ಎಂಬ ಭಯ ಬೇಡ. ಯಾವುದೇ ಒಬ್ಬ ಬಿಜೆಪಿ ಕಾರ್ಯಕರ್ತನ ಕಾಲಿಗೆ ಮುಳ್ಳು ಚುಚ್ಚಿದ್ರು ಅದರಿಂದ ಲಕ್ಷ್ಮಣ ಸವದಿ ಕಣ್ಣಲ್ಲಿ ನೀರು ಬರುತ್ತೆ ಎಂದು ಅಭಯ ನೀಡಿದರು.

Share Post

Leave a Reply

Your email address will not be published. Required fields are marked *

error: Content is protected !!