ಉಪ ಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು : ಶೆಟ್ಟರ್

ಕಲಬುರಗಿ : ಉಪ ಚುನಾವಣೆಯಲ್ಲಿ 15 ಕ್ಕೆ 15 ಸ್ಥಾನಗಳನ್ನೂ ಗೆಲ್ತೇವೆ, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮತ್ತಷ್ಟು ಸುಭದ್ರವಾಗಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು ಕೆಲವೆಡೆ ಬಿಜೆಪಿಗೆ ಬಂಡಾಯದ ಬಿಸಿ ಇರೋದು ನಿಜ, ಆದರೆ ಇದು ಎಲ್ಲ ಪಕ್ಷಗಳಲ್ಲಿಯೂ ಇದ್ದೇ ಇದೆ ಎಂದರು.

ಬಿಜೆಪಿಯಲ್ಲಿನ ಬಂಡಾಯ ಕ್ಷಣಿಕ. ಕೆಲವರ ಬಂಡಾಯ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ನಾವು ಗೆದ್ದೇ ಗೆಲ್ತೇವೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಸರ್ಕಾರ ಬೀಳಿಸೋಕೆ ಅವಕಾಶ ನೀಡಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ
ಒಂದು ಕಡೆ ಸರ್ಕಾರ ಬೀಳಿಸಲ್ಲ ಅಂತಾರೆ, ಮತ್ತೊಂದು ಕಡೆ ಅನರ್ಹರನ್ನು ಸೋಲಿಸೋದೆ ಗುರಿ ಅಂತಾರೆ. ಈ ರೀತಿ ದ್ವಂದ್ವ ಹೇಳಿಕೆ ನೀಡುತ್ತಿರುವ ಬಗ್ಗೆ ನೀವು ಕುಮಾರಸ್ವಾಮಿಯನ್ನು ಪ್ರಶ್ನಿಸಬೇಕು ಎಂದ ಅವರು ಕುಮಾರಸ್ವಾಮಿ ಹೇಳಿಕೆ ಗೊಂದಲಕಾರಿಯಾಗಿದೆ ಎಂದರು.

Share Post

Leave a Reply

Your email address will not be published. Required fields are marked *

error: Content is protected !!