ನಾನೊಬ್ಬ ರಾಜೀನಾಮೆ ಕೊಡದೆ ಇದ್ದಿದ್ರೂ ಸರ್ಕಾರ ಬೀಳ್ತಿತ್ತು

ಮಂಡ್ಯ : ಸಮ್ಮಿಶ್ರ ಸರ್ಕಾರದ ಹಲವು ಶಾಸಕರು ರಾಜೀನಾಮೆ ಕೊಡಲು ಸಿದ್ದರಿದ್ದರು. ಹಾಗಾಗಿ ನಾನೊಬ್ಬ ರಾಜೀನಾಮೆ ಕೊಡಲಿಲ್ಲ ಅಂದಿದ್ರೂ ಸರ್ಕಾರ ಬೀಳ್ತಿತ್ತು ಎಂದು ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಹೇಳಿದರು.

ಡಿಸೆಂಬರ್ 5 ರಂದು ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆ ಹಿನ್ನಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಜೆಡಿಎಸ್ ನಲ್ಲಿ ಹತ್ತು ವರ್ಷ ಇದ್ದೆ. ಯಾವತ್ತೂ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಲ್ಲೆ ಮಾಡಿಲ್ಲ. ಆದರೆ ಈಗ ಪಾಂಡವಪುರ, ಚನ್ನರಾಯಪಟ್ಟಣ ದಿಂದ ಕಾರ್ಯಕರ್ತರನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಅವರು ನೋವಿನಿಂದ ಆರೋಪಿಸಿದರು.

ನನ್ನನ್ನು ಬಾಂಬೆ ಕಳ್ಳ, ಅನರ್ಹ ಶಾಸಕ ಎಂದು ಜರಿಯುತ್ತಿದ್ದಾರೆ. ಆದರೆ ಸರ್ವೋಚ್ಛ ನ್ಯಾಯಾಲಯವೇ ನಮಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಸರ್ಕಾರ ಕಳೆದ ಎರಡು ತಿಂಗಳಲ್ಲಿ ಕ್ಷೇತ್ರಕ್ಕೆ 700 ಕೋಟಿ ಹಣ ಕೊಟ್ಟಿದೆ. ಪುಟ್ಟರಾಜು ಅವರು ಸಚಿವರಾಗಿದ್ದಾಗ 1800 ಕೋಟಿ ಹಣವನ್ನು ಅವರ ಕ್ಷೇತ್ರಕ್ಕೆ ಕೊಟ್ಟರು. ನನಗೇನು ಕೊಟ್ಟರು ಎಂದು ಅವರು ಪ್ರಶ್ನಿಸಿದರು.

Share Post

Leave a Reply

Your email address will not be published. Required fields are marked *

error: Content is protected !!