ಜಿದ್ದಾಜಿದ್ದಿನ ಸ್ಪರ್ಧೆಗೆ ಕಾಗವಾಡ ಕ್ಷೇತ್ರ ರೆಡಿ : ಗೆಲುವಿಗಾಗಿ ಅಭ್ಯಥಿಗಳ ಸರ್ಕಸ್

ಬೆಳಗಾವಿ : ಡಿಸೆಂಬರ್ 5 ರಂದು ನಡೆಯುವ ಕಾಗವಾಡ ವಿಧಾನಸಭೆ ಉಪಚುನಾವಣೆಗೆ ಕಾಗವಾಡ ಮತಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಕಾಗವಾಡ ಮತಕ್ಷೇತ್ರಕ್ಕೆ ಒಟ್ಟು ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳ ಪೈಕಿ 7 ನಾಮಪತ್ರಗಳು ತಿರಸ್ಕೃತಗೊಂಡಿವೆ. ಉಳಿದಂತೆ 10 ಮಂದಿ ಅಭ್ಯರ್ಥಿಗಳು ಕ್ರಮಬದ್ದವಾಗಿ ಕಣದಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಭರಮಗೌಡ (ರಾಜು)ಅಲಗೌಡ ಕಾಗೆ, ಬಿಜೆಪಿಯಿಂದ ಶ್ರೀಮಂತ ಬಾಳಾಸಾಬ ಪಾಟೀಲ್, ಜೆಡಿಎಸ್ ನಿಂದ ಶ್ರೀಶೈಲ ಪರಸಪ್ಪ ತುಗಶೆಟ್ಟಿ, ಉತ್ತಮ ಪ್ರಜಾಕೀಯ ಪಕ್ಷದಿಂದ ಸಚೀನ ಕಲ್ಲಪ್ಪ ಆಲಗೂರೆ, ವಂಚಿತ ಬಹುಜನ ಅಗಾಡಿ ಪಕ್ಷದಿಂದ ವಿವೇಕ ಜಯೇಂದ್ರ ಶೆಟ್ಟಿ, ಪಕ್ಷೇತರರಾಗಿ ಮುರಗೆಪ್ಪ ನಿಂಗಪ್ಪ ದೇವರೆಡ್ಡಿ, ದೀಪಕ ಜಗನ್ನಾಥ ಬುರ್ಲಿ, ಅರ್ಚನಾ ಗಣಪತಿ ಮೋಳೆಕರ, ಸಂದೀಪ್ ಗೋಪಾಲ ಕಾಂಬಳೆ, ಅಮೋಲ ಸದಾಶಿವ ಸರಡೆ ಕಣದಲ್ಲಿದ್ದಾರೆ.

ಕಾಗವಾಡ ಕ್ಷೇತ್ರದಲ್ಲಿ ಉಪ ಚುನಾವಣೆ ರಂಗೇರಿದ್ದು ಉಭಯ ಪಕ್ಷಗಳ ಪ್ರಚಾರ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿವೆ. ಈ ಮೂಲಕ ರಂಗೇರಿರುವ ಉಪ ಕದನದಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ಸರ್ಕಸ್ ಮಾಡುತ್ತಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!